Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುರಿ ಕಳ್ಳತನ | ಹೊಸದುರ್ಗ ಪೊಲೀಸರಿಂದ ಇಬ್ಬರು ಅಂತರ್ ಜಿಲ್ಲಾ ಕಳ್ಳರ ಬಂಧನ

---Advertisement---

ಸುದ್ದಿಒನ್, ಹೊಸದುರ್ಗ, ಅಕ್ಟೋಬರ್. 04 : ತಾಲ್ಲೂಕಿನ ಮಧುರೆ ಗ್ರಾಮದ ಮಾರುತಿ ಎಂಬುವವರ ಮನೆ ಪಕ್ಕದಲ್ಲಿರುವ ಶೆಡ್ ನಲ್ಲಿ ಕೂಡಿಹಾಕಿದ್ದ ಕುರಿಗಳ ಪೈಕಿ ಎರಡು ಕುರಿಗಳನ್ನು ಕಳುವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ರಾಜು (30 ವರ್ಷ) ಮತ್ತು ವಿಜೇಂದ್ರ (26 ವರ್ಷ) ಬಂಧಿತ ಆರೋಪಿಗಳು. ಕುರಿಗಳನ್ನು ಕಳ್ಳತನ ಮಾಡಿರುವ ಸಂಬಂಧ ಮಧುರೆ ಗ್ರಾಮದ ಮಾರುತಿ ಎಂಬುವವರು ಸೆಪ್ಟೆಂಬರ್. 30 ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 02 ರಂದು ಬೆಳಿಗ್ಗೆ 4-00 ಗಂಟೆಯ ಸಮಯದಲ್ಲಿ ಹೊಸದುರ್ಗ ತಾಲ್ಲೂಕಿನ ಜೋಡಿಶ್ರೀರಂಗಾಪುರ ಗ್ರಾಮದಲ್ಲಿರುವ ಹೈಸ್ಕೂಲ್ ಬಳಿ ಮಾರುತಿ ಸುಜುಕಿ ಎರಿಟಿಗಾ ಕಾರನಲ್ಲಿದ್ದ ಆರೋಪಿಗಳಾದ ಶಿವಮೊಗ್ಗ ಮೂಲದ
ರಾಜು (30 ವರ್ಷ) ಮತ್ತು ವಿಜೇಂದ್ರ (26 ವರ್ಷ) ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರಿಂದ ಹೊಸದುರ್ಗ ಪೊಲೀಸ್ ಠಾಣೆಯ 1, ಪಂಚನಹಳ್ಳಿ ಪೊಲೀಸ್ ಠಾಣೆಯ 1 ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಒಟ್ಟು 3,40,000/- ರೂ ಬೆಲೆಯ 14 ಕುರಿಗಳನ್ನು ಮತ್ತು 8 ಮೇಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 12 ಲಕ್ಷ ಬೆಲೆಯ ಕಾರು ಸೇರಿದಂತೆ ಒಟ್ಟು 15,40,000/- ಮೌಲ್ಯದ ಕುರಿಮೇಕೆಗಳು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಂಜಿತ್ ಕುಮಾರ ಬಂಡಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪತ್ತೆ ಕಾರ್ಯಾಚರಣೆಯು ಎಸ್.ಪಿ. ರಂಜಿತ್ ಕುಮಾರ ಬಂಡಾರು ಅವರ ಸೂಚನೆಯ ಮೇರೆಗೆ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶಿವಕುಮಾರ ಮಾರ್ಗದರ್ಶನದಲ್ಲಿ,
ಶಿವಕುಮಾರ ಟಿ ಎಂ ಡಿ.ವೈ.ಎಸ್.ಪಿ ಹಿರಿಯೂರುರವರ ಉಸ್ತುವಾರಿಯಲ್ಲಿ
ರಮೇಶ್ ಕೆ. ಟಿ. ಪಿ.ಐ. ಹೊಸದುರ್ಗರವರ ನೇತೃತ್ವದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ಮಹೇಶ್ ಕುಮಾರ ಪಿ ಎಸ್ ಐ ಹಾಗೂ ಸಿಬ್ಬಂದಿಯವರಾದ ಉಮೇಶ್, ಕುಮಾರ, ಗಂಗಾಧರ, ಚಂದ್ರಪ್ಪ ತಾಂತ್ರಿಕ ಸಿಬ್ಬಂದಿಯವರಾದ ಸತೀಶ್, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now