Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಲ್ ನಿನೊ ಜಾಗತಿಕ ತಾಪಮಾನ ಏರಿಕೆಯನ್ನು 2°C ಗಿಂತ ಹೆಚ್ಚಿಸಬಹುದು : ವರದಿ

---Advertisement---

ವಾಷಿಂಗ್ಟನ್.ಜುಲೈ.28: ಶಕ್ತಿಶಾಲಿ ‘ಎಲ್ ನಿನೋ’ ಹವಾಮಾನ ವೈಪರೀತ್ಯದ ಪರಿಣಾಮವಾಗಿ, 2027ರ ಆರಂಭದಲ್ಲಿ ವಿಶ್ವದ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗುವ ಆತಂಕಕಾರಿ ಸಾಧ್ಯತೆಯಿದೆ ಎಂದು ಯೂನಿವರ್ಸಿಟಿ ಆಫ್ ಮಿಯಾಮಿಯ ‘ರೋಸೆನ್ಸ್ಟೀಲ್ ಸ್ಕೂಲ್ ಆಫ್ ಮೆರೈನ್, ಅಟ್ಮಾಸ್ಫಿಯರಿಕ್, ಅಂಡ್ ಅರ್ಥ್ ಸೈನ್ಸ್’ ನಡೆಸಿದ ನೂತನ ಅಧ್ಯಯನ ತಿಳಿಸಿದೆ.

ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ‘ಬ್ಲೂಮ್ಬರ್ಗ್’ ವರದಿ ಮಾಡಿದೆ. ಅಧ್ಯಯನದ ಪ್ರಕಾರ, 2027ರ ಆರಂಭದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ದಾಟುವ ಶೇಕಡಾ 35 ರಿಂದ 40 ರಷ್ಟು ಸಾಧ್ಯತೆಯಿದೆ. ಇತ್ತೀಚಿನ ವಾರಗಳಲ್ಲಿ ಹವಾಮಾನ ತಜ್ಞರು ಮುನ್ಸೂಚನೆಗಳನ್ನು ಪರಿಶೀಲಿಸಿದ್ದು, ಪ್ರಸ್ತುತ ಸಕ್ರಿಯಗೊಳ್ಳುತ್ತಿರುವ ಎಲ್ ನಿನೋ ಇತಿಹಾಸದಲ್ಲೇ ಅತ್ಯಂತ ತೀವ್ರ ಸ್ವರೂಪದ್ದಾಗಿರಲಿದೆ ಎಂದು ಅಂದಾಜಿಸಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ರೋಸೆನ್ಸ್ಟೀಲ್ ಶಾಲೆಯ ಡೀನ್ ಬೆನ್ ಕರ್ಟ್ಮ್ಯಾನ್, ತಾಪಮಾನ ಏರಿಕೆಯಾಗುವ ಸಾಧ್ಯತೆಗಳು ಅತ್ಯಂತ ಹೆಚ್ಚಾಗಿವೆ. ನಿರಂತರವಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನದ (ಗ್ಲೋಬಲ್ ವಾರ್ಮಿಂಗ್) ಹಳೆಯ ಹಾದಿಗೆ ಈಗ ಅತ್ಯಂತ ಭೀಕರ ಎಲ್ ನಿನೋ ಕೈಜೋಡಿಸಿರುವುದು ಈ ಭಾರಿ ಪ್ರಮಾಣದ ತಾಪಮಾನ ಏರಿಕೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ವಾತಾವರಣದಲ್ಲಿದ್ದ ಏರೋಸಾಲ್ ಮಾಲಿನ್ಯದ ಶೀಘ್ರ ಕಡಿತವೂ ಈ ದಿಢೀರ್ ತಾಪಮಾನ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿಯವರೆಗೆ ಹಸಿರುಮನೆ ಅನಿಲಗಳಿಂದಾಗುತ್ತಿದ್ದ ತಾಪಮಾನವನ್ನು ಈ ಏರೋಸಾಲ್ ಮಾಲಿನ್ಯವು ಒಂದಿಷ್ಟು ಮಟ್ಟಿಗೆ ತಡೆಯುತ್ತಿತ್ತು (ಮರೆಮಾಚುತ್ತಿತ್ತು). ಆದರೆ ಈಗ ಮಾಲಿನ್ಯ ಕಡಿಮೆಯಾಗುತ್ತಿದ್ದಂತೆ ಭೂಮಿಯ ಕಾವು ನೇರವಾಗಿ ಹೆಚ್ಚಾಗುತ್ತಿದೆ. ವಿಶ್ವದ ಹಲವು ಭಾಗಗಳು ಈಗಾಗಲೇ ತೀವ್ರ ಹವಾಮಾನ ವೈಪರೀತ್ಯವನ್ನು ಎದುರಿಸುತ್ತಿರುವ ಬೆನ್ನಲ್ಲೇ ಈ ಮುನ್ಸೂಚನೆ ಹೊರಬಿದ್ದಿದೆ.

Join WhatsApp

Join Now

Join Telegram

Join Now