Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅವಳು ನನ್ನ ಜೊತೆಗೆ ಮಾತನಾಡಲ್ಲ ಎಂದಳು : ನೇಹಾ ಕೊಲೆಯ ಬಗ್ಗೆ ಫಯಾಜ್ ಹೇಳಿದ್ದೇನು..?

---Advertisement---

ಧಾರವಾಡ: ನೇಹಾ ಕೊಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆರೋಪಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಕೊಲೆ ಆರೋಪಿ ಫಯಾಜ್ ತಾನೇಕೆ ನೇಹಾಳನ್ನು ಕೊಲೆ ಮಾಡಿದೆ ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

 

ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಫಯಾಜ್ ವಿಚಾರಣೆ ವೇಳೆ ಕೊಲೆ ಮಾಡಿದ ಕಾರಣ ಬಾಯ್ಬಿಟ್ಟಿದ್ದಾನೆ. ‘ಅವಳು ನನ್ನ ಜೊತೆಗೆ ಮಾತನಾಡಲ್ಲ ಎಂದಳು ಅದಕ್ಕೆ ಚಾಕು ಹಾಕಿದೆ. ಒಂದು ವಾರದ ಹಿಂದೆಯೇ ಕಾಲೇಜು ಬಿಟ್ಟಿದ್ದೆ. ವಾರದ ಹಿಂದೆ ಕಾಲೇಜಿಗೆ ಹೋಗಿ ನೇಹಾಳನ್ನು ಮಾತನಾಡಿಸುವುದಕ್ಕೆ ಪ್ರಯತ್ನಿಸಿದ್ದೆ. ಆದರೆ ಅವಳು ಅಂದು ನಿನ್ನ ಜೊತೆಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿ ಅವೈಡ್ ಮಾಡಿದ್ದಳು. ಏಪ್ರಿಲ್ 18ರಂದು ಪರೀಕ್ಷೆ ಬರೆಯುವುದಕ್ಕೆ ಅವಳು ಬಿವಿಬಿ ಕಾಲೇಜಿಗೆ ಬಂದಿದ್ದಳು. ಆಗಲು ಪರೀಕ್ಷೆ ಮುಗಿಯುವ ತನಕ ಕಾದಿದ್ದೆ. ಪರೀಕ್ಷೆ ಮುಗಿಸಿ, ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಮಾತನಾಡಲಿಲ್ಲ. ಅದಕ್ಕೆ ಚಾಕು ಇರಿದೆ. ಅವಳಿಗೆ ಚಾಕು ಹಾಕುವಾಗ ನನಗೂ ಕೈಕಾಲು ಗಾಯವಾಗಿದೆ. ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

 

ಇನ್ನು ಫಯಾಜ್ ತಾಯಿ ಕೂಡ ಈ ಕೊಲೆ ಬಗ್ಗೆ ಮಾತನಾಡಿದ್ದು, ಮಗ ಮಾಡಿದ್ದು ದೊಡ್ಡ ತಪ್ಪು. ಆ ಹೆಣ್ಣು‌ಮಗು ಎಷ್ಟು ನರಳಿತೋ. ಅವನಿಗೆ ಶಿಕ್ಷೆಯಾಗಲಿ. ಆದರೆ ಇಬ್ಬರು ತುಂಬಾ ಪ್ರಿತೀ ಮಾಡುತ್ತಿದ್ದರು. ನಾನು ಮೊದಲು ಓದು ಅಂತಾನೆ ಹೇಳಿದ್ದೆ. ಆದರೆ ಈ ರೀತಿ ಮಾಡಿಕೊಂಡು ಕೂತಿದ್ದಾನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...