ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ನಿರಂಜನಾ ಮೂರ್ತಿ ತನ್ನ ಯೋಗ ಕೇಂದ್ರವನ್ನ ನಡೆಸುತ್ತಿದ್ದ. ಯೋಗ ಜೀವನಕ್ಕೆ ಬಹಳ ಮುಖ್ಯವೆಂದು ತಿಳಿದಿರುವ ಎಲ್ಲರು ಬಿಡುವು ಮಾಡಿಕೊಂಡು ಯೋಗ ಕ್ಲಾಸ್ ಹೋಗ್ತಾರೆ. ಆದ್ರೆ ಯೋಗ ಕಲಿಸಿಕೊಡುವ ನೆಪದಲ್ಲಿ ಕಾಮುಕನಾದರೆ ಅಹಿಸುವುದಾದರೂ ಹೇಗೆ. ಕಡೆಗೂ ಅಂಥದ್ದೊಬ್ಬ ಕಾಮುಕ ಈಗ ರಾಜರಾಜೇಶ್ವರಿ ಪೊಲೀಸರ ಅತಿಥಿಯಾಗಿದ್ದಾನೆ. ಆತನೇ ಯೋಗಗುರು ಎನಿಸಿಕೊಂಡಿರುವ ನಿರಂಜನಾ ಮೂರ್ತಿ.
ಇದೇ ಯೋಗ ಸೆಂಟರ್ ಗೆ ಬರುತ್ತಿದ್ದ 17 ವರ್ಷದ ಅಪ್ರಾಪ್ತೆಗೆ ಇಲ್ಲ ಸಲ್ಲದ ಮಾತು ಹೇಳಿ ತನ್ನ ಕಡೆಗೆ ಸೆಳೆದುಕೊಂಡಿದ್ದ. ಬಳಿಕ ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನಂತೆ. ಆ ಬಾಲಕಿಗೆ ಏನೇನೋ ಆಸೆಗಳನ್ನ ತೋರಿಸಿದ್ದನಂತೆ. ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ಈ ಮೂಲಕ ಮುಂದೆ ನಿನ್ನ ಜೀವನಕ್ಕೆ ಸರ್ಕಾರಿ ಕೆಲಸವೂ ಸಿಗಬಹುದು, ಜೀವನವೂ ಚೆನ್ನಾಗಿರುತ್ತೆ. ಯೋಗದಲ್ಲಿಯೇ ಅದನ್ನ ಸಾಧಿಸಬಹುದು, ಇದನ್ನ ಸಾಧಿಸಬಹುದು ಅಂತೆಲ್ಲಾ ಸುಳ್ಳುಗಳ ಕಂತೆಯನ್ನೇ ಕಟ್ಟಿ ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸುತ್ತಿದ್ದಂತೆ ಆರೋಪಿ ನಿರಂಜನಾ ಮೂರ್ತಿ ತಲೆಮರೆಸಿಕೊಂಡಿದ್ದನಂತೆ. ಆದ್ರೆ ಪೊಲೀಸರು ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಹುಡುಕಾಟ ಶುರಿ ಮಾಡಿದ್ದಾರೆ. ಕಡೆಗೂ ಪೊಲೀಸರು ಆತನನ್ನ ಅರೆಸ್ಟ್ ಮಾಡಿ, ತನಿಖೆಯನ್ನ ನಡೆಸುತ್ತಿದ್ದಾರೆ. ಯಾವ ಬಿಲದಲ್ಲಿಯೇ ಅಡಗಿದ್ದರು ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೆ ಇಂಥ ಕೆಲವೊಂದಿಷ್ಟು ಜನರಿಂದ ಅದೆಷ್ಟೋ ಪೋಷಕರಿಗೆ ಮಕ್ಕಳನ್ನ ಬೇರೆಡೆಗೆ ಕಳುಹಿಸುವುದಕ್ಕೂ ಆತಂಕ ಶುರುವಾದಂತೆ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














