Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SC/ST ಹಣ ದುರುಪಯೋಗ; ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳಿವೆಯಾ ಎಂದು ಯತ್ನಾಳ್ ಕಿಡಿ..!

---Advertisement---

ಬೆಂಗಳೂರು; ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಹುಲಿ ಹಾಗೂ ಎಸ್ಸಿ, ಎಸ್ಟಿ ವಿಚಾರ ಚರ್ಚೆಗೆ ಬಂದಿದೆ. ವಿಪಕ್ಷ ನಾಯಕರು ಎಸ್ಸಿ, ಎಸ್ಟಿ ಹಣ ಬೇರೆಯದ್ದಕ್ಕೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಸದನದಲ್ಲಿಯೇ ಚರ್ಚೆ ಶುರು ಮಾಡಿದರು. ಆರ್.ಅಶೋಕ್ ಅವರು ಕಾಡಿನಲ್ಲ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ಸಿ, ಎಸ್ಟಿ ಹಣವನ್ನ ಬಳಸುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ.ಖಾದರ್, ಅಲ್ಲಿಯೂ ಎಸ್ಸಿ, ಎಸ್ಟಿ ಸಮುದಾಯದವರು ಇದ್ದಾರೆ. ಫಾರೆಸ್ಟ್ ಏರಿಯಾದಲ್ಲಿ ಇದಾರೆ ಅಲ್ವಾ. ಅವರಿಗೆ ಆ ಹಣ ಕೊಟ್ಟಿದ್ದಾರೆಂದು ಆರ್.ಅಶೋಕ್ ಪ್ರಶ್ನೆಗೆ ಉತ್ತರ ನೀಡಿದರು. ಆದರೆ ಸ್ಪೀಕರ್ ಮಾತನ್ನು ವಿಪಕ್ಷ ನಾಯಕರು ಒಪ್ಪಲಿಲ್ಲ. ವಯನಾಡಿನವರಿಗೆ ಆ ಹಣವನ್ನ ಕೊಟ್ಟಿದ್ದು ಎಂದೇ ವಾಗ್ದಾಳಿ ನಡೆಸಿದರು. ಇದೇ ವೇಳೆ ಮಧ್ಯ ಪ್ರವೇಶ‌ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಜೋರು ಮಾಡಿದರು. ಕಾಡಿನಲ್ಲೇನಾದ್ರೂ ಲಿಂಗಾಯತ, ಬ್ರಾಹ್ಮಣ, ದಲಿತ ಹುಲಿಗಳು ಇವೆಯಾ..? ಎಂದು ಹೇಳುತ್ತಾ ಸ್ಪೀಕರ್ ಕಾಲೆಳೆದರು.

ಬಳಿಕ ಸ್ಪೀಕರ್ ಯು.ಟಿ ಖಾದರ್ ಅವರು ಸರಿ ಆ ಮಾತನ್ನ ನಾನು ಹಿಂದೆ ತೆಗೆದುಕೊಂಡಿದ್ದೇನೆ. ಚರ್ಚೆ ಬೇಡ. ನೀವೂ ಮಾತಾಡಿ ಎಂದರೂ ಕೇಳದ ಯತ್ನಾಳ್ ಹುಲಿ ರಕ್ಷಣೆಗಾಗಿ ಕೊಟ್ಟ ಹಣದ ಬಗ್ಗೆ ಅದೇ ಮಲವಾದ ಮಾಡುತ್ತಿದ್ದರು. ಆಗ ಯು.ಟಿ.ಖಾದರ್ ಆಯ್ತು ಅದನ್ನ ಬಿಟ್ಟು ಬಿಡಿ. ನೀವೋದಾಗ ನಿಮಗೆ ಬೇರೆ ಕೊಡೋಣಾ. ಅದನ್ಯಾಕೆ ಚರ್ಚೆ ಮಾಡೋಣಾ. ನನ್ನ ಆಲೋಚನೆಯಲ್ಲಿ ಹೇಳಿದೆ. ಅದನ್ನ ಮುಗಿಸ್ತಾ ಇದ್ದೀನಿ. ಯತ್ನಾಳ್ ಅವರೇ ಕುಳಿತುಕೊಳ್ಳಿ ಎಂದು ಖಾದರ್ ಹೇಳಿದರು. ಈ ಚರ್ಚೆ ಮಾತ್ರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment