Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸವಿತಾ ಸಮುದಾಯದವರು ಸಂಘಟಿತರಾಗಿ ಸಮಾಜದ ಬೆಳವಣಿಗೆಗೆ ಸಹಕರಿಸಿ : ಶಿವಲಿಂಗಾನಂದ ಶ್ರೀಗಳು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 27 :  ಸರ್ಕಾರದ ಸೌಲಭ್ಯಗಳನ್ನು ಪಡೆಯಲೂ ಹೋರಾಟ ಅಗತ್ಯವಾಗಿದೆ. ಸಣ್ಣ ಸಮಾಜವಾಗಿರುವುದರಿಂದ ಸಂಘಟಿರಾಗಿ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಬೇಕಿದೆ ಎಂದು ನಗರದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಸವಿತಾ ಸಮಾಜ, ತಾಲ್ಲೂಕು ಸಮಾಜ, ಮಹಿಳಾ ಸಮಾಜ, ಯುವ ಘಟಕ, ಕಲಾವಿದರ ಸಮಾಜ ಹಾಗೂ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಶ್ರೀ ಕರ್ಪೂರಿ ಠಾಕೂರ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಸವಿತಾ ಸಮಾಜಕ್ಕೆ ತನ್ನದೆ ಆದ ಇತಿಹಾಸ ಇದೆ. ವೇದಗಳ ಕಾಲದಿಂದಲೂ ಇಂದಿನವರೆವಿಗೂ ಸಂಗೀತ ಸೇವೆಯಲ್ಲಿ ಸೇವೆ ಅತಿ ಅಮೋಘವಾಗಿದೆ. ಭಗವಂತ ಹಾಗೂ ರಾಜ ಮಹಾರಾಜರ ಕಾಲದಲ್ಲಿ ಸಂಗೀತ ಸೇವೆಯನ್ನು ಮಾಡುವುದರ ಮೂಲಕ ನಿಮ್ಮ ಸಮಾಜ ಅವರಿಗೆ ಸಂತೋಷವನ್ನು ನೀಡುತ್ತಿದ್ದರು. ಸವಿತಾ ಸಮಾಜ ಇತರೆ ಸಮಾಜಕ್ಕೆ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಬೇರೆ ಸಮಾಜದರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.

ನಿಮ್ಮ ಸಮಾಜ ಈಗ ತಳಮಟ್ಟದಲ್ಲಿ ಇದೆ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲವಾಗಿದ್ದಾರೆ. ನಿಮ್ಮ ಬೇಡಿಕೆಗಳು ಹಾಗೇ ಇವೆ. ಇದನ್ನು ಪಡೆಯುವ ಸಲುವಾಗಿ ಹೋರಾಟವನ್ನು ಮಾಡುವುದು ಅನಿವಾರ್ಯವಾಗಿದೆ. ಇದಕ್ಕೂ ಮುನ್ನಾ ನೀವುಗಳು ಸಂಘಟಿರಾಗಬೇಕಿದೆ. ಸಮಾಜದ ಏಳ್ಗೆಗೆ ಸಹಕಾರ ನೀಡಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.

ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜು ಮಾತನಾಡಿ, ಸವಿತಾ ಸಮಾಜದಲ್ಲಿಯೂ ಉತ್ತಮವಾದ ವ್ಯಕ್ತಿಗಳಿದ್ದಾರೆ ಬಸವಣ್ಣನವರಿಗೆ ಆಶ್ರಯವನ್ನು ನೀಡಿದ ಬಿಜ್ಜಳ ಮಹಾರಾಜನು ಸಹಾ ನಿಮ್ಮ ಸಮಾಜದವರು ಎಂದು ಈಗ ನನಗೆ ತಿಳಿದಿದೆ. ಸವಿತಾ ಸಮಾಜದವರು ಸಂಘಟಿತರಾಗಬೇಕಿದೆ. ಸಮಾಜದ ಕೆಲಸವನ್ನು ಜಾಗರೂಕತೆಯಿಂದ ಮಾಡಬೇಕಿದೆ. ನಿಮ್ಮ ಸಮಾಜ ಸಣ್ಣ ಸಮಾಜವಾಗಿರುವುದರಿಂದ ನಿಮ್ಮನ್ನು ಯಾರೂ ಸಹಾ ಗಮನ ಹರಿಸುವುದಿಲ್ಲ ಈ ಹಿನ್ನಲೆಯಲ್ಲಿ ನಿಮ್ಮ ಸಮಾಜವನ್ನು ಸಂಘಟಿಸಿ, ಸಮಾಜದ ಏನೇ ಕೆಲಸಗಳಿದ್ದರು ಸಹಾ ಅದನ್ನು ನಾನು ಮಾಡಿಕೊಡುತ್ತೇನೆ, ಮುಖ್ಯಮಂತ್ರಿಗಳ ಬಳಿ ಹೋಗಲು ಸಹಾ ನಾನು ಸಿದ್ದನಿದ್ದೇನೆ ನಿಮ್ಮ ಸಹಾಯಕ್ಕೆ ಶಾಸಕರಾದ ವಿರೇಂದ್ರ ಸಹಾ ಇದ್ದಾರೆ. ನಿಮ್ಮ ಜನಾಂಗವನ್ನು ಎಸ್.ಸಿ.ಗೆ ಸೇರ್ಪಡೆ ಮಾಡಬೇಕಿದೆ. ಇದರ ಬಗ್ಗೆಯೂ ಸಹಾ ನಾನು ಗಮನ ನೀಡುತ್ತೇನೆ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಮಾತನಾಡಿ, ಈ ಹಿಂದೆ ಸಮಾಜ ಎನಾಗಿತ್ತು ಎನ್ನವುದಕ್ಕಿಂತ ಮುಂದೆ ಏನಾಗಬೇಕಿದೆ ಎಂಬುದರ ಬಗ್ಗೆ ಚಿಂತನೆಯನ್ನು ಮಾಡಬೇಕಿದೆ. ನನಗೆ ಮಡಿವಾಳ ಸಮಾಜ ಮತ್ತು ಸವಿತಾ ಸಮಾಜ ಎರಡು ಸಹಾ ಪ್ರೀತಿಗೆ ಪಾತ್ರವಾದ ಸಮಾಜಗಳಾಗಿವೆ, ಇವರಡನ್ನು ನಾನು ಅಭಿಮಾನದಿಂದ ಕಾಣುತ್ತೇನೆ ಏಕೆಂದರೆ ಈ ಎರಡು ಸಮಾಜಗಳು ಕಾಯಕವನ್ನು ಮಾಡುತ್ತಾ ಬೇರೆಯವರಿಗೆ ಸಹಾಯವನ್ನು ಮಾಡುವ ಸಮಾಜಗಳಾಗಿವೆ. ಈ ಹಿಂದೆ ಆಯಾ ಸಮಾಜದವರು ಆಯ ಸಮಾಜದ ಕೆಲಸವನ್ನು ಮಾಡುತ್ತಿದ್ದರು ಆದರೆ ಈಗ ಸವಿತಾ ಸಮಾಜದ ಕೆಲಸವನ್ನು ಮೇಲ್ವರ್ಗದವರು ಸಹಾ ಬ್ಯೂಟಿಪಾರ್ಲರ ಹೆಸರಿನಲ್ಲಿ ನಿಮ್ಮ ಕಾಯಕವನ್ನು ಹೈಜಾಕ್ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರು ಸಹಾ ಹೋರಾಟವನ್ನು ಮಾಡುತ್ತಿಲ್ಲ, ಸಣ್ಣ ಸಣ್ಣ ಸಮಾಜವನ್ನು ಸರ್ಕಾರ ಗುರುತಿಸಬೇಕಿದೆ ಅವರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಬೇಕಿದೆ. ಇದರ ಬಗ್ಗೆ ಚುನಾಯಿತ ಪ್ರತಿನಿಧಿಗಳು ಗಮನ ನೀಡಬೇಕಿದೆ ಎಂದರು.

ವಿಶ್ವಕರ್ಮ ಸಮಾಜದ ಮುಖಂಡರಾದ ಪ್ರಸನ್ನಕುಮಾರ್ ಮಾತನಾಡಿ, ಸಣ್ಣ ಸಮಾಜದ ಸಂಘಟಿತರಾಗದಿದ್ದರೆ ಸರ್ಕಾರದ ಯಾವುದೇ ರೀತಿಯಬ ಸೌಲಭ್ಯಗಳು ಪಡೆಯಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ಸವಿತಾ ಸಮಾಜ ಸಂಘಟಿತರಾಗಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗಬೇಕಿದೆ ಏಕೆಂದರೆ ಇಲ್ಲ ಸಂಘಟನೆಯಾಗಿಲ್ಲ, ಜಯಂತಿಗಳ ಆಚರಣೆಯಿಂದ ಏನು ಸಾಧನೆಯಾಗುವುದಿಲ್ಲ ಇದರ ಬದಲು ಹೋರಾಟವನ್ನು ಮಾಡುವುದರ ಮೂಲಕ ನಿಮ್ಮ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ನಿಮ್ಮ ಸಮಾಜದಲ್ಲಿನ ಸಣ್ಣ ಸಣ್ಣ ಮನೋಭಾವವನ್ನು ಬಿಡಬೇಕಿದೆ. ಹೋರಾಟದ ಮನೋಭಾವವನ್ನು ರೂಢಿಸಿಕೊಳ್ಳಬೇಕಿದೆ. ಸರ್ಕಾರ ಇಂತಹ ಸಮಾಜವನ್ನು ಗುರುತಿಸಿ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ನಾಮ ನಿರ್ದೇಶನ ಮಾಡುವುದರ ಮೂಲಕ ಸಮಾಜವನ್ನು ಗುರುತಿಸಬೇಕಿದೆ ಎಂದು ಕರೆ ನೀಡಿದರು.

ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಮಾತನಾಡಿ, ಸವಿತಾ ಸಮಾಜವನ್ನು ಸಂಘಟಿಸಲು ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ. ನಮ್ಮ ಸಮಾಜವನ್ನು ಸಂಘಟನೆ ಮಾಡಲು ಹಲವಾರು ವರ್ಷಗಳಿಂದ ನಿರಂತರವಾಗಿ ಶ್ರಮವನ್ನು ಹಾಕಲಾಗುತ್ತಿದೆ. ನಾವುಗಳು ಸಂಘಟಿತರಾಗದ ಹೊರೆತು ಸರ್ಕಾರ ಮಟ್ಟದಿಂದ ಏನೂ ಸಹಾ ಪಡೆಯಲು ಸಾಧ್ಯವಿಲ್ಲ ನಗರ ಮಟ್ಟದಲ್ಲಿ ಸಮಾಜವನ್ನು ಸಂಘಟಿಸಲಾಗುತ್ತಿದೆ ಮುಂದಿನ ದಿನದಲ್ಲಿ ಗ್ರಾಮಾಂತರ ಮಟ್ಟದಲ್ಲಿಯೂ ಸಹಾ ಸಮ್ಮ ಸಮಾಜವನ್ನು ಸಂಘಟಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಗೌರವಾಧ್ಯಕ್ಷರಾದ ಲಿಂಗರಾಜು, ಸಂಪಿಗೆ ತಿಪ್ಪೇಸ್ವಾಮಿ, ವೇಣುಗೋಪಾಲ್, ಬಾಲು, ಶ್ರೀನಿವಾಸ್, ನರಸಿಂಹ, ರಾಜಣ್ಣ, ಚಲಪತಿ, ಕುಮಾರ್, ಕೃಷ್ಣಮೂರ್ತಿ, ಬಸವರಾಜು, ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

ಗಂಗಾಧರ್ ಮತ್ತು ಸಂಗಡಿಗರು ನಾಡಗೀತೆ ಗಾಯನ ಮಾಡಿದರು, ಕುಮಾರ್ ಸ್ವಾಗತಿಸಿದರು. ಗುರುಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.

 

ಚಿತ್ರದುರ್ಗ ನಗರದ ಜಿಲ್ಲಾ ಸವಿತಾ ಸಮಾಜ, ತಾಲ್ಲೂಕು ಸಮಾಜ, ಮಹಿಳಾ ಸಮಾಜ, ಯುವ ಘಟಕ, ಕಲಾವಿದರ ಸಮಾಜ ಹಾಗೂ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಶ್ರೀ ಕರ್ಪೂರಿ ಠಾಕೂರ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಬೆಟ್ಟದ ತಪ್ಪಲಿನಲ್ಲಿನ ಏಕನಾಥೇಶ್ವರಿ ಅಮ್ಮನವರ ಪಾದಗುಡಿ ಬಳಿಯಿಂದ ಇಂದು ಬೆಳಿಗ್ಗೆ ಮೆರವಣಿಗೆಯನ್ನು ನಡೆಸಲಾಯಿತು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ್ ಸವಿತಾ ಮಹರ್ಷಿಯವರವ ಬಾವಚಿತ್ರಕ್ಕೆ ಪುಪ್ಪ ನಮನ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು.

ಈ ಮೆರವಣಿಗೆಯಲ್ಲಿ ಸವಿತಾ ಮಹರ್ಷಿಯವರ ಹಾಗೂ ಭಾರತ ರತ್ನ ಪ್ರಶಸ್ತಿ ಪುರಸ್ಕøತರಾದ ಬಿಹಾರದ ಮಾಜಿ ಮುಖ್ಯಮಂತ್ರಿಗಳು ಸಮಾಜದ ಮುಖಂಡರಾದ ಶ್ರೀ ಕರ್ಪೂರಿ ಠಾಕೂರ್ ರವರ ಭಾವಚಿತ್ರವನ್ನು ಇರಿಸಲಾಗಿತ್ತು. ಈ ಮೇಳದಲ್ಲಿ ನಾದಸ್ವರ, ವೀರಗಾಸೆ, ಟಾಷ್ಯೊ, ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ನಗರದ ಏಕನಾಥೇಶ್ವರಿ ಪಾದಗುಡಿಯಿಂದ ರಾಜ ಬೀದಿ ದೊಡ್ಡಪೇಟೆ, ರಂಗಯ್ಯನ ಬಾಗಿಲು, ಬಸವಮಂಟಪ ರಸ್ತೆ, ಶಿಕ್ಷಕರ ಭವನ, ಅಂಬೇಡ್ಕರ್ ವೃತ್ತ, ಬಿಡಿರಸ್ತೆಯ ಮೂಲಕ ತರಾಸು ರಂಗಮಂದಿರವನ್ನು ತಲುಪಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!