Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಗೀತಾ ಅಥವಾ ವಿನಯ್ : ಕಾರ್ತೀಕ್ ಆಯ್ಕೆ ಯಾರು..? ಏನಾಗ್ತಿದೆ ಬಿಗ್ ಬಾಸ್ ಮನೆಯಲ್ಲಿ..?

---Advertisement---

 

 

ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಈಗ ರಿಯಲ್ ಆಟ ಶುರುವಾಗಿದೆ. ಬಿಗ್ ಬಾಸ್ ಪ್ರತಿದಿನ ಹೊಸ ಹೊಸ ಟಾಸ್ಕ್ ಗಳನ್ನ ನೀಡುತ್ತಿದೆ. ಆ ಟಾಸ್ಕ್ ಗಳನ್ನು ಆಡುವುದರ ಜೊತೆಗೆ, ಮನೆಯಲ್ಲಿ ಜಗಳ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪ್ರತಾಪ್ ಟಾರ್ಗೆಟ್ ಆಗಿದ್ದರು. ಹೀಗಾಗಿ ಕುಂತ್ರು, ನಿಂತ್ರು ಅವರದ್ದೇ ಟಾಪಿಕ್ ಆಗಿತ್ತು. ಈಗ ಮಾತಿಗೆ ಮುಂಚೆ ಜಗಳ ಆಗ್ತಾ ಇರುವುದು, ವಿನಯ್ ಹಾಗೂ ಸಂಗೀತಾ ನಡುವೆ. ಆದರೆ ಜಗಳದ ನಡುವೆ ಸಿಕ್ಕಿರುವುದು ಕಾರ್ತೀಕ್.

ಹೌದು ಬಿಗ್ ಬಾಸ್ ಮನೆಯಲ್ಲಿ ಕಾರ್ತೀಕ್ ಮತ್ತು ಸಂಗೀತಾ ನಡುವೆ ಎಷ್ಟು ಒಳ್ಳೆಯ ಬಾಂಧವ್ಯ ಬೆರೆತಿದೆಯೋ, ಸಂಗೀತಾ, ವಿನಯ್ ನಡುವೆ ಅಷ್ಟೇ ಜಗಳ ಮುಂದುವರೆದಿದೆ. ಜೊತೆಗೆ ಕಾರ್ತೀಕ್ ಹಾಗೂ ವಿನಯ್ ನಡುವೆಯೂ ಒಳ್ಳೆ ಒಡನಾಟವಿದೆ. ಈಗ ಕಾರ್ತಿಕ್ ಗೆ ಯಾರ ಪರ ಮಾತನಾಡಬೇಕು ಎಂಬುದೇ ದೊಡ್ಡ ಗೊಂದಲದ ಗೂಡಾಗಿದೆ.

ಕಾರ್ತಿಕ್ ಬಳಿ ಬಂದ ವಿನಯ್, ಎಲ್ಲರೂ ಒಂದು ಕಡೆ ಇದ್ದರೆ ನೀನು ಮಾತ್ರ ಇನ್ನೊಂದು ಕಡೆ ಇದ್ದೀಯಾ. ಏನೋ ಮಾಡಿದ್ದೀನಿ ನಾನು ನಿನಗೆ‌. ನನ್ನ ಹತ್ತಿರ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದೇ ಕೇಳಿದ್ದಾರೆ. ಅತ್ತ ಸಂಗೀತಾ ಕೂಡ ಕಾರ್ತೀಕ್ ಬಳಿ ಬಂದು, ನೀನು ಇಲ್ಲದೆ ಇದ್ದರು ನಾನು ನನ್ನ ಪರವಾಗಿ‌ ನಿಂತುಕೊಳ್ಳುತ್ತೇನೆ. ನನ್ನ ಆಟ ನಾನೇ ಆಡುತ್ತೇನೆ ಎಂದಿದ್ದಾರೆ. ಇದು ಕಾರ್ತಿಕ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೆಳೆಯನ ಜೊತೆಗೆ ನಿಲ್ಲುವುದಾ, ಸಂಗೀತಾ ಪರ ವಹಿಸುವುದಾ ತಿಳಿಯದೆ ಕಂಗಲಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...