Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾವೇರಿ ನೀರಿಗಾಗಿ ಮಿಡಿಯದ ಸ್ಯಾಂಡಲ್ ವುಡ್ ಮಂದಿ : ಸಾಮಾಜಿಕ ಜಾಲತಾಣದಲ್ಲಿ ರೈತರ ಆಕ್ರೋಶ

---Advertisement---

 

ಮಂಡ್ಯ: ಕಾವೇರಿ ನೀರು ಉಳಿಸುವುದಕ್ಕಾಗಿ ಮಂಡ್ಯ ರೈತರು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಕಾವೇರಿ ವಿಚಾರಕ್ಕೇನೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಯುತ್ತಿದೆ. ಆದರೆ ಸ್ಯಾಂಡಲ್ ವುಡ್ ನ ಸೆಲೆಬ್ರೆಟಿಗಳು ಯಾರೂ ಕೂಡ ಕಾವೇರಿಯ ಬಗ್ಗೆ ಗಮನ ಕೊಡುತ್ತಿಲ್ಲ. ಇದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ನಟ-ನಟಿಯರು ಇಲ್ಲಿಯ ತನಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡದೆ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಧಿಕ್ಕಾರ ಕೂಗುತ್ತಿದ್ದಾರೆ. ಸ್ಟಾರ್ ನಟರ ಫೋಟೋಗಳನ್ನು ಅಂಟಿಸಿ, ವಿರೋಧಿಸುತ್ತಿದ್ದಾರೆ. ಪೋಸ್ಟರ್ ನಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಹೋರಾಟದ ವೇಳೆ ದಿವಂಗತ ನಟರನ್ನು ನೆನೆದಿದ್ದಾರೆ. ಯಾಕಂದ್ರೆ ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಈ ಎಲ್ಲಾ ದೊಡ್ಡ ದೊಡ್ಡ ನಟರು ರೈತರಿ ಅನ್ಯಾಯ ಆಗ್ತಾ ಇದೆ ಎಂದಾಗ ಆ ಪ್ರತಿಭಟನೆ ಯಲ್ಲಿ ಭಾಗಿಯಾಗುತ್ತಿದ್ದರು. ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಈಗಿನ ನಟರು ಯಾವುದೇ ಹೋರಾಟಕ್ಕೂ ಸ್ಪಂದಿಸುತ್ತಿಲ್ಲ. ನಮ್ಮಿಂದ ನಟರೇ ವಿನಃ ನಟರಿಂದ ನಾವಲ್ಲ. ನಟರನ್ನು ನಂಬದೇ ಎಲ್ಲಾ ಕನ್ನಡಿಗರು ರೈತರ ಪರವಾಗಿ ನಿಲ್ಲಬೇಕು. ರೈತನಿಲ್ಲದೆ ಜಗತ್ತು ಇಲ್ಲ. ರೈತ ಉಳಿದರೆ ಜಗತ್ತು ಉಳಿದಂತೆ ಎಂದು ಪೋಸ್ಟ್ ಗಳನ್ನು ಅಂಟಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...