ಸಿದ್ಧಾರ್ಥ್ ಟ್ವೀಟ್ ಗೆ ವಿರೋಧ : ಸೈನಾ ಬಳಿ ಕ್ಷಮೆ ಕೇಳಿದ ನಟ..!

suddionenews
1 Min Read

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇತ್ತೀಚೆಗೆ ಒಂದು ಪೋಸ್ಟ್ ಹಾಕಿದ್ದರು. ಅದು ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಉಂಟಾದ ಭದ್ರತೆಯ ಕೊರತೆ ಬಗ್ಗೆ. ಯಾವುದೇ ರಾಷ್ಟ್ರದಲ್ಲಿಯೇ ಆಗಲಿ ಪ್ರಧಾನಿಗೆ ಭದ್ರತೆ ಸಿಗದೇ ಹೋದಲ್ಲಿ ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜಾಗರೂಕತೆಯನ್ನ ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದರು.

ಇದನ್ನ ವಿರೋಧಿಸುವ ಭರದಲ್ಲಿ ತಮಿಳು ನಟ ಸಿದ್ಧಾರ್ಥ್, ಮುಜುಗರಕ್ಕೀಡು ಮಾಡುವಂತ ಪ್ರತಿಕ್ರಿಯೆ ನೀಡಿದ್ದರು. ಆ ಪದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ದೇಶವನ್ನ ಪ್ರತಿನಿಧಿಸುವ ಆಟಗಾರ್ತಿ ಬಗ್ಗೆ ಈ ರೀತಿ ಕಮೆಂಟ್ ಯಾರು ಒಪ್ಪಲಿಲ್ಲ. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ನಟ ಸಿದ್ದಾರ್ಥ್ ಕ್ಷಮೆಯಾಚಿಸಿದ್ದಾರೆ.

ಡಿಯರ್ ಸೈನಾ.. ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್ ಗೆ ಕೆಟ್ಟ ಪ್ರತಿಕ್ರಿಯೆ ನೀಡಿದ್ದೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಹಾಗೂ ನಾನು ಬಳಸಿದ ಕೆಟ್ಟ ಪದಗಳನ್ನ ನಾನು ಕೂಡ ಸಮರ್ಥಿಸಿಕೊಳ್ಳಲ್ಲ. ಒಂದು ಜೋಕ್ ಅನ್ನ ವಿವರಿಸಬೇಕಾದ ಸಂದರ್ಭ ಬರುತ್ತೆ ಅಂದ್ರೆ ಅದು ಒಳ್ಳೆಯ ಸಂದರ್ಭವಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನೀವೂ ನನ್ನ ಕ್ಷಮೆಯನ್ನು ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *