ಇಂದು ಅಕ್ಷಯ ತೃತೀಯ : 100 ವರ್ಷಗಳ ಬಳಿಕ ಗಜಕೇಸರಿ ಯೋಗ

1 Min Read

ಅಕ್ಷಯ ತೃತೀತ ಎಂದರೆ ಹೆಣ್ಣು ಮಕ್ಕಳಿಗೆ ಬಲು ಪ್ರೀತಿ.‌ಈ ದಿನದಂದು ಚಿನ್ನ, ಬೆಳ್ಳಿ ಖರೀದಿ ಮಾಡಿದರೆ ಅಕ್ಷಯ ಪಾತ್ರಯಷ್ಟೇ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ. ಅದಕ್ಕಾಗಿಯೇ ಇಂದು ಬಂಗಾರ ಖರೀದಿ ಮಾಡಲು ಸಾಲು ಸಾಲು ಜನ ಕ್ಯೂ ನಿಂತಿರುತ್ತಾರೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಕರೆಯಲಾಗುತ್ತದೆ. ಈ ದಿನ ಸಾಕಷ್ಟು ಮಹತ್ವವನ್ನು ಹೊಂದಿದೆ. ಅದರ ಜೊತೆಗೆ ಈ ಅಕ್ಷಯ ತೃತೀಯ ಪ್ರತಿ ವರ್ಷದಂತೆ ಅಲ್ಲ. 100 ವರ್ಷಗಳ ಬಳಿಕ ಗಜಕೇಸರಿ ಯೋಗ ಕೂಎ ಬಂದಿದೆ.

ಚಂದ್ರ ಮತ್ತು ಗುರು ಇಂದು ಏಕಕಾಲದಲ್ಲಿ ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ. ಈ ಮೂಲಕ ಗಜಕೇಸರಿ ಯೋಗ ಪ್ರಾಪ್ತಿಯಾಗಲಿದೆ. ಇಂದು ಏನೇ ಕೆಲಸ‌ ಮಾಡಿದರು ಒಳೀತೆ ಆಗಲಿದೆ. ಇಂದು ಮುಖ್ಯವಾಗಿ ಜನ ಚಿನ್ನ ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಅದಕ್ಕೆ ಒಂದು ಮಹತ್ವ ಕೂಡ ಇದೆ.

ಅಕ್ಷಯ ಎಂದರೆ ಅದು ಎಂದಿಗೂ ಖಾಲಿಯಾಗದ ಅಥವಾ ನಾಶವಾಗದ ಎಂಬರ್ಥವನ್ನು ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ದೀರ್ಘಕಾಲದವರೆಗೆ ಕೆಲವು ಶುಭ ಕಾರ್ಯಗಳನ್ನು ಮಾಡಲು ಯೋಚಿಸುತ್ತಿದ್ದರೆ, ಅಕ್ಷಯ ತೃತೀಯಕ್ಕಿಂತ ಉತ್ತಮವಾದ ದಿನ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ. ಈ ದಿನದಂದು ಶುಭ ಕಾರ್ಯವನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ. ಹಾಗೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಕುಟುಂಬದ ಮೇಲೆ ಇರುತ್ತದೆ.

ಇಂದು ಹಲವು ರಾಶಿಗಳಿಗೆ ಶುಭಫಲವಾಗಲಿದೆ. ಇದರ ಜೊತೆಗೆ ಇಂದು ಮದುವೆ, ಗೃಹ ಪ್ರವೇಶದಂತೆ ಯಾವುದೇ ಶುಭ ಸಮಾರಂಭ ಮಾಡುವುದಕ್ಕೂ ಮುಹೂರ್ತವಿಡುವ ಅವಶ್ಯಕತೆ ಇಲ್ಲ. ಯಾವ ಸಮಯದಲ್ಲಾದರೂ ಮಾಡಬಹುದು. ಅಷ್ಟು ಒಳ್ಳೆಯ ದಿನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *