ನಿನ್ನೆ ಇಡೀ ದೇಶವೇ ಒಂದು ಕ್ಷಣ ಆತಂಕಗೊಳ್ಳುವಂತ ವಾತಾವರಣ ನಿರ್ಮಾಣ ಮಾಡಿದ್ದರು ಕೆಲವು ಕಿಡಿಗೇಡಿಗಳು. ಲೋಕಸಭೆಗೆ ನುಗ್ಗಿ, ಭಯ ಉಂಟು ಮಾಡಿದ್ದರು. ಈ ಸಂಬಂಧ ಈಗಾಗಲೇ ಐವರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ಚುರುಕುಗೊಂಡಿದೆ. ಇದರ ನಡುವೆ ಆರೋಪಿ ಸಾಗರ್ ಶರ್ಮಾ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟರ್ ವೈರಲ್ ಆಗಿದೆ.
ಆರೋಪಿ ಸಾಗರ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಯತ್ನ ಮಾಡುವ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು. ‘ಸೋಲು ಗೆಲುವಿಗಿಂತ ಪ್ರಯತ್ನ ಮಾಡುವುದು ಮುಖ್ಯ. ನೀವೂ ಗೆದ್ದರೂ ಸೋತರು ಪ್ರಯತ್ನ ಮಾಡುವುದು ಮುಖ್ಯ. ನೋಡೋಣಾ ಎಷ್ಟು ಸುಂದರವಾದ ಜರ್ನಿ ಇದೆ ಎಂದು. ನಿಮ್ಮನ್ನು ಮತ್ತೆ ನೋಡುವ ಭರವಸೆ ಇದೆ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಸದ್ಯಕ್ಕೆ ವೈರಲ್ ಆಗಿದೆ.
ಸಾಗರ್ ಶರ್ಮಾ ಹಾಗೂ ಮನೋರಂಜನ್ ಇಬ್ಬರು ನಿನ್ನೆ ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅದೃಷ್ಟವಶಾತ್ ಯಾರಿಗೂ ಏನು ತೊಂದರೆಯಾಗಿಲ್ಲ. ಆದರೆ ಲೋಕಸಭೆಯ ಒಳಗೆ ಈ ರೀತಿ ನುಗ್ಗಿ ದಾಂಧಲೆ ನಡೆಸಿದ್ದು ಆತಂಕಕಾರಿ ಘಟನೆಯಾಗಿದೆ. ಅಷ್ಟು ದೊಡ್ಡ ಭದ್ರತೆಯ ನಡುವೆಯೂ ಒಳಗೆ ಬಂದಿದ್ದು ಮಾತ್ರ ಆಶ್ಚರ್ಯವಾಗಿದೆ. ಇದಕ್ಕೆಲ್ಲ ಕಾರಣ ಪ್ರತಾಪ್ ಸಿಂಹ ಅವರು ನೀಡಿದ ಪಾಸ್. ಅವರ ಪಾಸ್ ನಿಂದಾಗಿಯರೆ ಒಳಗೆ ಬರಲು ಸುಲಭವಾಗಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೆ ಈಗ ಕಠಿಣ ನಿಯಮಗಳನ್ನು ಮಾಡಲಾಗಿದೆ. ಯಾರಿಗೆಂದರೆ ಯಾರಿಗೆ ಇನ್ಮುಂದೆ ಪಾಸ್ ಸಿಗದ ಹಾಗೆ ಎಚ್ಚರವಹಿಸಲಾಗಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






