ದಾವಣಗೆರೆ: ಸದ್ಯ ಸಾದಿಕ್ ಪೈಲ್ವಾನ್ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ನಾಯಕರು ಅವರ ಮನೆಗೆ ಹೋಗಿ ಮಾತನ್ನಾಡಿಕೊಂಡು ಬಂದಿದ್ದಾರೆ. ಈ ಸಂಬಂಧ ಎಸ್ ಎಸ್ ಮಲ್ಲಿಕಾರ್ಜುನ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾಧಿಕ್ ಪೈಲ್ವಾನ್ ಬೇರೆ ಅಲ್ಲ, ನಾವೂ ಬೇರೆ ಅಲ್ಲ. ಒಂದೇ ಮನೆಯ ಅಣ್ಣತಮ್ಮಂದಿರಂತೆ ಇದ್ವಿ. ಸಣ್ಣ ಪುಟ್ಟ ಗೊಂದಲಗಳು ಆಗಿವೆ. ಮೊದಲಿನಿಂದಲೂ ನಮಗೆ ಬೆಂಬಲ ಸೂಚಿಸಿದ್ದಾರೆ. ಈಗಲೂ ಸೂಚಿಸ್ತಾರೆ. ಅವನು ಪೈಲ್ವಾನ ಬಹಳ ಒಳ್ಳೆಯ ಮನುಷ್ಯ. ಅವನಿಗೆ ದಿಕ್ಕು ತಪ್ಪಿಸೋರು ಬಹಳ ಮಂದಿ ಇದ್ದಾರೆ ಎಂದಿದ್ದಾರೆ.
ಇಂದು ದಾವಣಗೆರೆಗೆ ಶಾಸಕ ಪ್ರದೀಪ್ ಈಶ್ವರ್ ಕೂಡ ಹೋಗಿದ್ದಾರೆ. ಆದರೆ ಬಿಜೆಪಿ ಕಚೇರಿ ಮುಂದೆ ದೊಡ್ಡ ಹೈಡ್ರಾಮವನ್ನೇ ನಡೆಸಿದ್ದಾರೆ. ಈ ಬಗ್ಗೆ ಮಲ್ಲಿಕಾರ್ಜುನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ನಂಗೆ ಗೊತ್ತಿಲ್ಲ. ಅವರು ಆ ರೀತಿ ಹೇಳಬಾರದು, ಇವರು ಆ ರೀತಿ ಹೇಳಬಾರದಿತ್ತು. ಎಲ್ಲರು ಸೇರಿ ಸ್ನೇಹ ಮನೋಭಾವದಿಂದ ಇರಬೇಕು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸರಿಕರಿಯಪ್ಪ ಹಾಗೂ ಅವರ ಮಗನು ಚೆನ್ನಾಗಿದ್ದಾರೆ. ಅದಕ್ಕೆ ನಾನು ಮೊದಲೇ ಹೇಳಿದ್ದೀನಿ. ಎಲ್ಲರೂ ಸ್ನೇಹ ಮನೋಭಾವನೆಯಿಂದ ಚುನಾವಣೆ ಮಾಡಿ ಅಂತ ಎಂದಿದ್ದಾರೆ.
ಸಿ.ಎಂ.ಇಬ್ರಾಹಿಂ ಅವರು ಮುಸ್ಲಿಂ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡುತ್ತಿರುವ ಬಗ್ಗೆ ಮಾತನ್ನಾಡಿದ ಮಲ್ಲಿಕಾರ್ಜುನ್ ಅವರು, ಎಲ್ಲರ ಮನವೊಲಿಸಿ, ಒಳ್ಳೆಯ ರೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡಿ ಅಂತ ಕೇಳಿಕೊಳ್ತೇನೆ. ಇನ್ನು ಬಹಳ ಸಮಯ ಇದೆ. ಡೆಲ್ಲಿ ರಾಜಕೀಯ ಅಂದ್ರೆ ಸ್ವಲ್ಪ ಜನ ಇರ್ತಾರೆ ಎಂದಿದ್ದಾರೆ.
















