Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಎಸ್.ಎಲ್.ಭೈರಪ್ಪ ನಿಧನ : ಸ್ಮರಿಸಿದ ಡಿಕೆಶಿ, ವಿಜಯೇಂದ್ರ

---Advertisement---

 

ಬೆಂಗಳೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಾ, ಅವರ ಕಾದಂಬರಿಗಳನ್ನು ನೆನೆದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಾ, ಎಸ್ ಎಲ್ ಭೈರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ‌ ಕೋರಿ ದರ್ಶನ ಪಡೆದಿದ್ದೇನೆ. ಬಹುಷಃ 1984ರಲ್ಲಿ ಅಂತ ಕಾಣುತ್ತದೆ
ನಾವು ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ವಿ. ಪಿಜಿಆರ್ ಸಿಂಧ್ಯಾ ನೇತೃತ್ವದಲ್ಲಿ ನಡೆದಿತ್ತು. ಭೈರಪ್ಪನವರು ಅಂದ್ರೆ ನೇರ ನುಡಿ. ಯಾವುದಕ್ಕೂ ಅಂಜಿಕೆಯಿಲ್ಲ. ಅವರನ್ನು ಬನಶಂಕರಿ ಯಿಂದ ಮೆರವಣಿಗೆ ಮಾಡಿಕೊಂಡು ಹೋಗುದ್ವಿ‌ ಆವಾಗಲೇ. ಹೊರದೇಶದಲ್ಲೂ, ವಿಭಿನ್ನ ಭಾಷೆಗಳಲ್ಲೂ ಭಾಷಾಂತರ ಆಗಿದ್ದು ಅವರ ಕೃತಿಗಳು. ಭೈರಪ್ಪವನರು ಸಂಸ್ಕೃತಿ‌ ಎತ್ತಿ ಹಿಡಿದಿದ್ದಾರೆ. ರಾಷ್ಟ್ರಪ್ರಶಸ್ತಿ ಗಳು ಅವರಿಗೆ ಸಿಕ್ಕಿವೆ. ದೇಶದ‌ ಎಲ್ಲ ಗಣ್ಯರು ಕಂಬನಿ ವ್ಯಕ್ತ ಪಡಿಸಿದ್ದಾರೆ. ಅವರ ಸಿದ್ದಾಂತ, ನಿಲುವು ನಡೆ ಸಮಾಜದ ಎಲ್ಲ ವರ್ಗಕ್ಕೆ ಮಾರ್ಗದರ್ಶನವಾಗಿದೆ. ಸರ್ಕಾರದ ಎಲ್ಲ ಗೌರವ ಅವರಿಗೆ ಇದೆ.

ಭೈರಪ್ಪನವರ ಸ್ಮಾರಕ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿ, ಸ್ಮಾರಕ ನನ್ನ ಒಬ್ಪನ ಮಾತಿನಿಂದ ಆಗಲ್ಲ. ಅದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಬೇಕು. ಕ್ಯಾಬಿನೆಟ್ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಹಿರಿಯ ಸಾಹಿತಿ, ಕಾದಂಬರಿಕಾರರು ಡಾ‌ ಎಸ್ ಎಲ್ ಭೈರಪ್ಪನವರು. ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟವರು ಇವರು. ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗಳ ಒಡೆಯ. ಅವರ ಚಿಂತನೆ ರಾಷ್ಟ್ರೀಯ ಭಕ್ತಿಯದ್ದಾಗಿತ್ತು. ಅವರಿಗೆ ರಾಷ್ಟೀಯ ವಿಚಾರಗಳಲ್ಲಿದ್ದ ಸ್ಪಷ್ಟತೆ. ಅವರ ಕಾದಂಬರಿ ಒಂದು ರೀತಿ ಸತ್ಯತೆ ಅನ್ವೇಷಣೆ ರೀತಿ ಇರ್ತಿತ್ತು. ನಾನು‌ ಬಿಜೆಪಿ ಅಧ್ಯಕ್ಷ ಆದಾಗ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೆ. ಅವರು ಈಗ ನಮ್ಮ ನಡುವೆ ಇಲ್ಲ. ಅವರ ಕುಟುಂಬಕ್ಕೆ, ಕೋಟ್ಯಾಂತರ ಅಭಿಮಾನಿಗಳಿಗೆ ತುಂಬಲಾರದ ನಷ್ಟ. ರಾಜ್ಯ ಸರ್ಕಾರ ಹಾಗು ಸಿಎಂಗೆ ಮನವಿ ಮಾಡ್ತೀನಿ. ಸ್ಮಾರಕ ನಿರ್ಮಾಣ ಮಾಡಲೇಬೇಕು ಎಂದು ಮನವಿ ಮಾಡ್ತೀನಿ ಎಂದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now