ಬೆಂಗಳೂರು : ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು RSS ಗೀತೆಯನ್ನ ಹಾಡಿದ್ದರು. ಇದಕ್ಕೆ ಹಲವು ವಿರೋಧಿಸಿದರೆ, ಇನ್ನು ಹಲವರು ಪ್ರೋತ್ಸಾಹಿಸಿದರು. ಅದರಲ್ಲೂ ಬಿಜೆಪಿಯವರು ಬೆಂಬಲವನ್ನ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ನ ಹಿರಿಯ ನಾಯ ಬಿಕೆ ಹರಿಪ್ರಸಾದ್ ಅವರು ಮಾತನಾಡಿ, ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಸಂಬಂಧ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ಬಿಜೆಪಿ ಅವರು ಇಂಥ ವಿಚಾರಗಳನ್ನ ಸಮರ್ಥಿಸಿಕೊಳ್ಳಲೇಬೇಕು. ಯಾಕಂದ್ರೆ, ಈ ದೇಶದಲ್ಲಿ ಆರ್ ಎಸ್ ಎಸ್ ಈಗಾಗಲೇ ಮೂರು ಬಾರಿ ನಿಷೇಧ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಸಂಘಕ್ಕೆ ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಆದರೆ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಾಡುವುದು ತಪ್ಪು ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆರ್ ಎಸ್ ಎಸ್ ಗೀತೆ ಹಾಡಬಾರದು. ಈ ವಿಚಾರಕ್ಕೆ ಅವರು ಕ್ಷಮೆ ಕೇಳಲೇಬೇಕು. ಯಾಕಂದ್ರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ. ಅದರಲ್ಲಿ ಆರ್ ಎಸ್ ಎಸ್ ಅವರು ಇದ್ದಾರೆ. ಜಮಾಹತ್ ಇಸ್ಲಾಮಿ ಅವರೂ ಇದ್ದಾರೆ. ಎಲ್ಲರೂ ಇದ್ದಾರೆ. ತಾಲಿಬಾನಿಗಳು ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಆ ರೀತಿ ಹೇಳುವ ಹಾಗೆಯೇ ಇಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳಿದ್ದರೆ ಕ್ಷಮೆ ಕೇಳಬೇಕಾಗುತ್ತದೆ. ಯಾಕಂದ್ರೆ ಮಹಾತ್ಮ ಗಾಂಧಿಯವರನ್ನು ಕೊಂದಂತ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿಯ ಪ್ರಾರ್ಥನೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.


















