Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

RSS ವಿಚಾರ: ಯಾರಿಂದಾನೂ ಕೂದಲು ಅಲ್ಲಾಡಿಸೋದಕ್ಕೆ ಆಗಲ್ಲ : ಶ್ರೀರಾಮುಲು

---Advertisement---

ಬೆಂಗಳೂರು: RSS ನಡೆಸುವ ಕಾರ್ಯಕ್ರಮಗಳಿಗೆ ಸರ್ಕಾರದ ಅನುಮತಿ ಪಡೆಯಬೇಕು, ಕೆಲವೊಂದು ಕಡೆ RSS ಕಾರ್ಯಕ್ರಮವನ್ನ ನಿಷೇಧ ಮಾಡಬೇಕು ಎಂಬೆಲ್ಲಾ ಮಾತುಗಳು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಜೊತೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಖಂಡಿತ ದೇಶದಲ್ಲಿ RSS ಬ್ಯಾನ್ ಮಾಡ್ತೇವೆ ಎಂಬ ಮಾತನ್ನ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ RSS ಬ್ಯಾನ್ ಬಗ್ಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ.

ಬಿವೈ ವಿಜಯೇಂದ್ರ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆ ಗೊತ್ತಿಲ್ಲದೆ ಇರುವವರು, ಅದರ ಕೆಲದ ಮಾಹಿತಿ‌ಕೊರತೆ ಇರುವವರು, ತಮ್ಮ ಪ್ರಚಾರಕ್ಕೋಸ್ಕರ, ಚಟದಿಂದ ಮಾತನಾಡುವವರು ಮಾತ್ರ ಈ ರೀತಿ ಮಾತನಾಡುವುದಕ್ಕೆ ಸಾಧ್ಯ. ಪ್ರಿಯಾಂಕ್ ಖರ್ಗೆ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಪತ್ರ ಬರೆದಿದ್ದಾರೆ ಅಂತ ಇದು ಅವರ ಮೂರ್ಖತನದ ಪ್ರದರ್ಶನ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಶ್ರೀರಾಮುಲು ಅವರು ಮಾತನಾಡಿ, ಮಂತ್ರಿಗಳಾದ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ RSS ಶಾಖೆಗಳು ಮಾಡ್ತಿರುವ ಕಾರ್ಯಕ್ರಮವನ್ನು ನಿಷೇಧಿಸಬೇಕೆಂದು ಪತ್ರವನ್ನ ಬರೆದಿದ್ದಾರೆ. ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಯಾರಿಂದಾನೂ ಕೂದಲು ಕೂಡ ಅಲ್ಲಾಡಿಸೋದಕ್ಕೆ ಆಗ್ಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರೇಣುಕಾಚಾರ್ಯ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗವಾಗಿಯೇ ಸವಾಲು ಹಾಕ್ತೀನಿ. ತಾಕತ್ತಿದ್ರೆ ಸಂಘ ಸಂಸ್ಥೆಗಳನ್ನ ಬ್ಯಾನ್ ಮಾಡಿ ನೋಡೋಣಾ. ನಾಗರಿಕರು ಸಂಕಷ್ಟದಲ್ಲಿದ್ದಾಗ ನಮ್ಮ ಪರಿವಾರದವರು ಉಳಿಸುವ ಕೆಲಸ ಮಾಡ್ತಾ ಇದೆ. ದೇಶದ್ರೋಹಿಗಳಿದ್ದಾರಲ್ಲ ಅವರನ್ನ ಬ್ಯಾನ್ ಮಾಡೋದಕ್ಕೆ ಹೇಳ್ರಿ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now