ಬೆಂಗಳೂರು.ಜೂನ್.19: ಭಾರತದ ಪ್ರಮುಖ ಡಿಜಿಟಲ್ ಪಾವತಿ ಆಪ್ಗಳಲ್ಲಿ ಒಂದಾದ ಫೋನ್ ಪೇ (PhonePe) ತನ್ನ ಬಳಕೆದಾರರಿಗೆ ಹೊಸದೊಂದು ಶಾಕ್ ನೀಡಿದೆ. ಒಂದು ವರ್ಷದಿಂದ ಬಳಕೆಯಾಗದೆ ಸುಮ್ಮನೆ ಬಿದ್ದಿರುವ ‘ಇನ್ಆಕ್ಟಿವ್’ ವಾಲೆಟ್ಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) 100 ರೂಪಾಯಿ ನಿರ್ವಹಣಾ ಶುಲ್ಕ ವಿಧಿಸಲು ಕಂಪನಿ ಮುಂದಾಗಿದೆ ಎಂದು ವರದಿಯಾಗಿದೆ. ಈ ವಿಷಯ ಆನ್ ಲೈನ್ ನಲ್ಲಿ ತಿಳಿಯುತ್ತಿದ್ದಂತೆ ಗ್ರಾಹಕರು ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫೋನ್ ಪೇ ಇತ್ತೀಚೆಗೆ ತನ್ನ ಗ್ರಾಹಕರಿಗೆ ಸಂದೇಶಗಳನ್ನು (SMS) ಕಳುಹಿಸುತ್ತಿದ್ದು, ನಿಮ್ಮ ವಾಲೆಟ್ ಅನ್ನು ರೀಚಾರ್ಜ್ ಮಾಡಿ ಅಥವಾ ಬಳಸಿ, ಇಲ್ಲದಿದ್ದರೆ ಇನ್ ಆಕ್ಟಿವ್ ನಿರ್ವಹಣಾ ಶುಲ್ಕವನ್ನು ವಿಧಿಸಲಾಗುವುದು ಎಂದು ಎಚ್ಚರಿಸುತ್ತಿದೆ. ಈ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಹಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯ ನಿಯಮಾವಳಿಗಳಲ್ಲಿ ಈ ಶುಲ್ಕದ ಬಗ್ಗೆ ಮೊದಲೇ ಉಲ್ಲೇಖವಿದ್ದರೂ, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.

⚠️ Seriously, what is this, PhonePe?
PhonePe has started warning users that inactive wallets will be charged ₹100 every quarter after 12 months of inactivity.
Most people don't even use PhonePe Wallet. They use UPI directly from their bank account and may not even know a… pic.twitter.com/SZHFcgASng
— Abhishek Yadav (@yabhishekhd) June 17, 2026
ಫೋನ್ ಪೇ ಸಹಾಯವಾಣಿ ಪುಟಗಳ ಪ್ರಕಾರ, ಸತತ 365 ದಿನಗಳ ಕಾಲ ಯಾವುದೇ ವಹಿವಾಟು ನಡೆಸದ ವಾಲೆಟ್ ಅನ್ನು ‘ಇನ್ಆಕ್ಟಿವ್’ ಎಂದು ಪರಿಗಣಿಸಲಾಗುತ್ತದೆ. ಶುಲ್ಕ ವಿಧಿಸುವ ಮುನ್ನ ಗ್ರಾಹಕರಿಗೆ ನೋಟಿಸ್ ನೀಡಲಾಗುತ್ತದೆ. ನಿಮ್ಮ ವಾಲೆಟ್ ನಲ್ಲಿ ಹಣವಿದ್ದರೆ ಮಾತ್ರ ಪ್ರತಿ ಕ್ವಾರ್ಟರ್ಗೆ 100 ರೂಪಾಯಿಗಳನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ಪ್ರಸಿದ್ಧ ಟಿಪ್ ಸ್ಟರ್ ಅಭಿಷೇಕ್ ಯಾದವ್ ಸೇರಿದಂತೆ ಹಲವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಅಭಿಷೇಕ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ, ಇದೇನಿದು ಫೋನ್ ಪೇ? ಬಹುತೇಕರು ಫೋನ್ ಪೇ ವಾಲೆಟ್ ಬಳಸುವುದೇ ಇಲ್ಲ, ನೇರವಾಗಿ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ಪಾವತಿ ಮಾಡುತ್ತಾರೆ. ಈಗ ವಾಲೆಟ್ ಅನ್ನು ಮುಚ್ಚಬೇಕೆಂದರೆ ಪೂರ್ಣ ಕೆವೈಸಿ ಮಾಡಬೇಕು ಎನ್ನುತ್ತಿದ್ದಾರೆ. ಬಳಸದ ವೈಶಿಷ್ಟ್ಯಕ್ಕೆ ಶುಲ್ಕ ವಿಧಿಸುವುದು ಮತ್ತು ಅದನ್ನು ಮುಚ್ಚಲು ಕಷ್ಟ ಪಡುವಂತೆ ಮಾಡುವುದು ಗ್ರಾಹಕರ ಕೋಪಕ್ಕೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















