ಫೆ. 23 ರಂದು ರೋಟರಿ ಹುಟ್ಟುಹಬ್ಬ, ರೋಟರಿ ವಿಶ್ವಶಾಂತಿ ಹಾಗೂ ಸೌಹಾರ್ದ ತಿಳುವಳಿಕೆ ದಿನ ಆಚರಣೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 21 : ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಜನರ ಬದುಕಿನ ಮೇಲೆ ಒಂದು ಶತಮಾನಕ್ಕೂ ಹೆಚ್ಚು ಕಾಲ ತನ್ನ ಮಾನವೀಯ ಸೇವಾ ಮೌಲ್ಯಗಳ ಮೂಲಕ ಸಕಾರಾತ್ಮಕ ಪ್ರಭಾವ ಬೀರುತ್ತಾ ಬಂದಿರುವ ರೋಟರಿ ಇಂಟನ್ಯಾಷನಲ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ, ಚಿತ್ರದುರ್ಗದ ರೋಟರಿ ಕ್ಲಬ್ ಆಫ್ ಚಿತ್ರದುರ್ಗ, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ಹಾಗೂ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ, ದಿನಾಂಕ 23 ಫೆಬ್ರವರಿ 2026 ಸೋಮವಾರದಂದು ರೋಟರಿ ಹುಟ್ಟುಹಬ್ಬ ಹಾಗೂ ರೋಟರಿ ವಿಶ್ವಶಾಂತಿ ಹಾಗೂ ಸೌಹಾರ್ದ ತಿಳುವಳಿಕೆ ದಿನವನ್ನು ಆಚರಿಸಲಾಗುತ್ತಿದೆ.

ಅಂದು ಬೆಳಗ್ಗೆ 10 ಗಂಟೆಗೆ ನಗರದ ಡಿ.ಸಿ. ವೃತ್ತದ ಬಳಿಯಿರುವ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನ – ರೋಟರಿ ಶಾಲೆಯಿಂದ ರೋಟರಿ ಶಾಲೆಯ ಆಯ್ದ ವಿದ್ಯಾರ್ಥಿಗಳು, ರೋಟರಿ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಜಾಥಾ ಹೊರಟು ನಗರದ ರೋಟರಿ ವೃತ್ತದವರೆಗೆ ತೆರಳಿ, ರೋಟರಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಹಿಂದಿರುಗಲಿದ್ದು ಈ ಜಾಥಾವನ್ನು ಚಿತ್ರದುರ್ಗ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶಿವಕುಮಾರ್ ಆರ್. ಉದ್ಘಾಟನೆ ಮಾಡಲಿದ್ದಾರೆ.

ಸಂಜೆ 7 ಗಂಟೆಗೆ ನಗರದ ಡಿ.ಸಿ. ವೃತ್ತದ ಬಳಿಯಿರುವ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ನೆರವೇರಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಬಿ.ಟಿ. ಕುಮಾರಸ್ವಾಮಿ ಚಿತ್ರದುರ್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಚ್.ಎಸ್. ಮಹೇಶ್ವರಪ್ಪ ಅವರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು  ಪಾಲಾಕ್ಷಯ್ಯ ಎಲ್. ಅವರು, ಚಿತ್ರದುರ್ಗ ಡಿಸ್ಟ್ರಿಕ್ಟ್ ಪ್ರಾಕ್ಟಿಸಿಂಗ್ ಅರ್ಕಿಟೆಕ್ಟ್ಸ್ ಅಂಡ್ ಸಿವಿಲ್ ಎಂಜಿನೀರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಎಸ್.ಎಸ್. ಪ್ರಸಾದ್ ಅವರು ಭಾಗವಹಿಸ ಲಿದ್ದಾರೆ.ಗಣ್ಯರಿಂದ ರೋಟರಿ ಸಂಸ್ಥಾಪಕರಾದ ಕೀರ್ತಿಶೇಷ ಪಾಲ್ ಹ್ಯಾರಿಸ್ ರವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಲಿದೆ.

ರೋಟರಿ ಇಂಟನ್ರ್ಯಾಷನಲ್ ಡಿಸ್ಟ್ರಿಕ್ಟ್ 3160 ನ ಮಾಜಿ ಡಿಸ್ಟ್ರಿಕ್ಟ್ ಗವರ್ನರ್‍ಗಳಾದ ರೋ. ಪಿ.ಎಚ್.ಎಫ್. ಪಿ. ಎಸ್. ಶಂಭುಲಿಂಗಪ್ಪ, ರೋ. ಪಿ.ಎಚ್.ಎಫ್. ಮಧುಪ್ರಸಾದ್ ರೋಟರಿ ಇಂಟನ್ರ್ಯಾಷನಲ್ ಡಿಸ್ಟ್ರಿಕ್ಟ್ 3160 ದ ಡಿಸ್ಟ್ರಿಕ್ಟ್ ಗವರ್ನರ್ ರೋ. ಪಿ.ಎಚ್.ಎಫ್. ಎಂ.ಕೆ. ರವೀಂದ್ರ ಡಿಸ್ಟ್ರಿಕ್ಟ್ ಎಕ್ಸಕ್ಯೂಟಿವ್ ಸೆಕ್ರೆಟರಿ ರೋ. ಪಿ.ಎಚ್.ಎಫ್. ಉಮೇಶ ವಿ. ತುಪ್ಪದ್ ಸೇರಿದಂತೆ ಚಿತ್ರದುರ್ಗದ ಮೂರೂ ರೋಟರಿ ಕ್ಲಬ್‍ನ ಅಧ್ಯಕ್ಷರು-ಕಾರ್ಯದರ್ಶಿಗಳು ಮತ್ತು ಸದಸ್ಯರು, ಎರಡೂಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷರು – ಕಾರ್ಯದರ್ಶಿಗಳು ಮತ್ತು ಸದಸ್ಯರು, ರೋಟರಿ ಹಿತೈಷಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Share This Article
Enable Notifications OK No thanks