Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮೃತರ ಕುಟುಂಬಸ್ಥರನ್ನು ಭೇಟಿಯಾದ ಯಶ್ : ಅಭಿಮಾನಿಗಳಿಗೆ ಹೇಳಿದ್ದೇನು‌‌..?

---Advertisement---

ಗದಗ: ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟಲು ಮೂವರು ಸಾವಿನ ಬಾಗಿಲು ತಟ್ಟಿದ್ದಾರೆ. ಇದು ಯಶ್ ಗೆ ಹೇಳಲಾರದ ನೋವಾಗಿ ಪರಿಣಮಿಸಿದೆ. ಶೂಟಿಂಗ್ ಬ್ಯುಸಿಯಲ್ಲಿದ್ದ ಯಶ್, ಮೃತರನ್ನು ನೋಡಲು ಮೃತರ ಗ್ರಾಮಕ್ಕೆ ಬಂದಿದ್ದಾರೆ. ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಯಶ್, ನನ್ನ ಬರ್ತ್ ಡೇಯಿಂದ ಯಾರಿಗೂ ನೋವಾಗುವುದು ಬೇಡ. ನನಗೆ ಇವೆಲ್ಲ ಇಷ್ಟ ಆಗಲ್ಲ. ಅಭಿಮಾನ ಇರಲಿ. ಆದರೆ ಆ ಅಭಿಮಾನ ಅತಿಯಾಗುವುದು ಬೇಡ. ಈ ರೀತಿ ಕಟೌಟ್ ಕಟ್ಟುವುದು, ಬೈಕ್ ಚೇಸ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ನನಗೆ ನೀವೂ ಅಭಿಮಾನ ತೋರಿಸುವುದು ಎಂದರೆ ಅದುವೆ ಒಳ್ಳೆಯ ಕೆಲಸ ಮಾಡುವುದು. ಇನ್ಯಾವತ್ತು ಈ ರೀತಿ ಮಾಡಬೇಡಿ. ಮೊದಲು ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.

ಬ್ಯಾನರ್ ಕಟ್ಟುವ ವೇಳೆ 21 ವರ್ಷ ಹನಮಂತ ಹರಿಜನ, 20 ವರ್ಷದ ಮುರಳಿ ನಡವಿನಮನಿ ಹಾಗೂ 19 ವರ್ಷದ ನವೀನ್​ ಗಾಜಿ ಎನ್ನಲಾಗಿದೆ. ಇವರಷ್ಟೇ ಅಲ್ಲ ಇನ್ನೂ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಭೂಮಿಯಲ್ಲಿ ಏಕಕಾಲಕ್ಕೆ ಮೂವರ ಯುವಕರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ. ಯಶ್ ವಿಚಾರ ತಿಳಿದ ಕೂಡಲೇ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ಮೃತರ ಗ್ರಾಮಕ್ಕೆ ಓಡೋಡಿ ಬಂದಿದ್ದಾರೆ. ಅಭಿಮಾನಿಗಳಿಂದ ಈ ರೀತಿಯ ಅವಘಡವಾಗುತ್ತಿರುವುದು ಇದೇ ಮೊದಲೇನು ಅಲ್ಲ. ಸ್ಟಾರ್ ಗಳು ಕೂಡ ಅಭಿಮಾನಿಗಳ ಜೊತೆಗೆ ಮನವಿ ಮಾಡುತ್ತಲೇ ಇರುತ್ತಾರೆ. ದೂರದಿಂದಾನೇ ಹಾರೈಸಿದರು ಸಾಕು ಎಂದು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment