ಬೆಂಗಳೂರು; ಇಂದು ನಟ ದರ್ಶನ್ ಕೋರ್ಟ್ ಗೆ ಹಾಜರಾಗಿದ್ದರು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇನ್ನು ಕೇಸ್ ನಡೆಯುತ್ತಿರುವ ಕಾರಣ ದರ್ಶನ್ ಕೋರ್ಟ್ ಗೆ ಹಾಜರಾಗಿದ್ದರು. ಕೇಸ್ ನಡೆಯುತ್ತಿರುವ ಕಾರಣ, ಕೋರ್ಟ್ ಗೆ ಹಾಜರಾಗಿ ಬಂದಿದ್ದಾರೆ. ಇದೇ ಕೇಸ್ ಗೆ ಸಂಬಂಧಿಸಿದಂತೆ ಕಳೆದ ಬಾರಿ ಕೋರ್ಟ್ ಗೆ ಗೈರಾಗಿದ್ದರು. ಹೀಗಾಗಿ ಕೋರ್ಟ್ ಕೂಡ ಅಸಾಮಾಧಾನ ವ್ಯಕ್ತಪಡಿಸಿತ್ತು.
ಯಾಕಂದ್ರೆ ಕೊಲೆ ಕೇಸಲ್ಲಿ ಜಾಮೀನು ನೀಡಿದಾಗಲೇ ಕೋರ್ಟ್ ಗೆ ವಿಚಾರಣೆಯ ಸಮಯದಲ್ಲಿ ಮಿಸ್ ಮಾಡದೆ ಹಾಜರಾಗಬೇಕು ಎಂಬುದನ್ನ ತಿಳಿಸಿತ್ತು. ಪ್ರತಿ ವಿಚಾರಣೆಗೆ ಹಾಜರಾಗಬೇಕೆಂಬ ಕಂಡೀಷನ್ ಹಾಕಿದ್ದರು, ಆದರೂ ಆಗಾಗ ವಿಚಾರಣೆಗೆ ತಪ್ಪಿಸಿಕೊಂಡಿದ್ದರು. ಈ ವಾರ ಕೋರ್ಟ್ ಗೆ ಹಾಜರಾಗಿದ್ದಾರೆ. ತಮ್ಮ ಬಳಿ ಇರುವ ಬಿಳಿ ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಕೋರ್ಟ್ ಗೆ ಬಂದಿದ್ದರು. ಜೊತೆಗೆ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಪವಿತ್ರಾ ಗೌಡ ಕೂಡ ರೇಣುಕಾಸ್ವಾಮಿ ಪ್ರಮುಖ ಆರೋಪಿಯಾಗಿದ್ದರು. ಹೀಗಾಗಿ ಇಂದು ಪವಿತ್ರಾ ಗೌಡ ಕೂಡ ಕೋರ್ಟ್ ಗೆ ಹಾಜರಾಗಿದ್ದರು.
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಸಂಭ್ರಮ ಇತ್ತು. ಸ್ನೇಹಿತರ ಜೊತೆಗೆ ಸೇರಿ, ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ದರ್ಶನ್, ತಮ್ಮ ಪತ್ನಿಗಾಗಿ ಹಾಡುಗಳನ್ನ ಹಾಡಿ ಸಂಭ್ರಮಿಸಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಆ ರೀತಿ ಇದ್ದದ್ದು ಕಂಡು ಇಡೀ ಅಭಿಮಾನಿ ಬಳಗ ಖುಷಿ ಪಟ್ಟಿದೆ. ಸದಾ ಕಾಲ ಹೀಗೆ ಖುಷಿಖುಷಿಯಾಗಿರಿ ಎಂದಿದ್ದಾರೆ.



