ಸುದ್ದಿಒನ್, , ಏಪ್ರಿಲ್. 14 : ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತುತ ಸಮಾಜಕ್ಕೆ ಹಾಗೂ ಮಾನವ ಕುಲ ಭೂಮಿಯ ಮೇಲೆ ಇರುವವರೆಗೂ ಅವರ ವಿಚಾರ ಧಾರೆಗಳು, ಚಿಂತನೆಗಳು ಅತ್ಯಗತ್ಯ, ಶತ ಶತಮಾನಗಳು ಕಳೆದರು ಜಾತಿ ವ್ಯವಸ್ಥೆ ನಾಶ ಅಥವಾ ಜಾತಿ ಪದ್ದತಿ ಆಚರಣೆಯಲ್ಲಿ ಬದಲಾವಣೆ ಕಂಡುಬರದೆ ಇರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಚಳ್ಳಕೆರೆಯ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಸ.ರಾ.ಲೇಪಾಕ್ಷ ಹೇಳಿದರು.
ತಾಲ್ಲೂಕಿನ ಆಯಿತೋಳ್ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಗೆಳೆಯರ ಬಳಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನದಂದು ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಕರ ನುಡಿಯಲ್ಲಿ ಅವರು ಮಾತನಾಡಿದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಇಂದು ಜೀವಂತವಾಗಿರುವುದು ದೇಶದ ಅಭಿವೃದ್ಧಿಗೆ ಇದು ಸಹ ಮಾರಕವಾಗಿ ಪರಿಣಮಿಸಿದೆ,ಒಂದು ಆರೋಗ್ಯಕರ ಸಮಾಜ ಸಾಮಾಜಿಕ ಸಮಸ್ಯೆಯಿಂದ ಮುಕ್ತ ವಾಗಿರಬೇಕು,ಇಲ್ಲವಾದರೆ ಸಮ ಸಮಾಜ ನಿರ್ಮಾಣ ಮಾಡಲು ಅಸಾಧ್ಯ, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸಮಬಾಳು ಗ್ರಂಥದಲ್ಲಿ ಇದ್ದರೆ ಸಾಲದು ಅದು ಪ್ರಾಯೋಗಿಕವಾಗಿ ಜಾರಿಯಾಗಬೇಕು, ಆಗ ಬಡತನ ನಿರ್ಮೂಲನೆ, ಸಾಮಾಜಿಕ ಸಮಸ್ಯೆ ಇವುಗಳನ್ನು ತೊಲಗಿಸಲು ಸಾಧ್ಯ.
ಆಧುನಿಕ ಸಮಾಜದಲ್ಲಿ ಸಹ ಕೆಲ ಜಾತಿ ಸಂಬಂಧಿಸಿದಂತೆ ಕ್ರೂರ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ಮಾಲತೇಶ್ ಮುದ್ದಜ್ಜಿ,ಜಿಲ್ಲಾಧ್ಯಕ್ಷರು,ಕರ್ನಾಟಕ ಸರ್ಕಾರಿ ನೌಕರರ ಸಂಘ.ಚಿತ್ರದುರ್ಗ, ಆನಂದ್,ಪಿಡಿಓ,ಬಾಗೇಶ್,ರಾಜ್ಯ ಪರಿಷತ್ತ್ ಸದಸ್ಯರು.ಕರ್ನಾಟಕ ಸರ್ಕಾರಿ ನೌಕರರ ಸಂಘ.ಹಾಗೂ ಕ್ಯಾತಣ್ಣ,ಗ್ರಾಮ ಪಂಚಾಯತ್ ಸದಸ್ಯರು,ಹಾಗೂ ಮಾಜಿ ಸದಸ್ಯರುಗಳು, ಮಲ್ಲಿಕಾರ್ಜುನ, ವಕೀಲರು, ಪ್ರದೀಪ್, ಹಾಗೂ ಗ್ರಾಮದ ಮುಖಂಡರು, ಯುವಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













