ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 14 : ಐತಿಹಾಸಿಕ ಚಿತ್ರದುರ್ಗ ಕೋಟೆಯನ್ನಾಳಿದ ರಾಜಾವೀರ ಮದಕರಿನಾಯಕರ ಪುಣ್ಯಸ್ಮರಣೆ ಅಂಗವಾಗಿ ರಾಜಾವೀರ ಮದಕರಿನಾಯಕರ ಸ್ಮಾರಕ ನಿರ್ಮಾಣ ವೇದಿಕೆಯಿಂದ ಗುರುವಾರ ಚಿತ್ರದುರ್ಗದಿಂದ ಹೊರಟ ಯಾತ್ರೆ ರಾತ್ರಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ತಲುಪಲಿದೆ.
ಕೋಟೆ ರಸ್ತೆಯಲ್ಲಿರುವ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುರುಘಾಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಹಳಿಯೂರು, ಹಿರೇಗುಂಟನೂರು, ಬಿ.ದುರ್ಗ, ಜಾನಕಲ್, ಹಾಲುರಾಮೇಶ್ವರದ ಮೂಲಕ ಯಾತ್ರೆ ಶ್ರೀರಂಗಪಟ್ಟಣದ ಕಡೆ ಸಾಗಿತು. ಚಿತ್ರದುರ್ಗದ ಕೋಟೆಯಲ್ಲಿ ಗತ ವೈಭದಿಂದ ಮೆರೆದ ಸಾಮ್ರಾಜ್ಯದ ಕೊನೆಯ ದೊರೆ ರಾಜಾವೀರ ಮದಕರಿನಾಯಕರು ಕ್ರಿ.ಶ. 1782 ಮೇ 15 ರಂದು ಶ್ರೀರಂಗಪಟ್ಟಣದಲ್ಲಿ ಮರಣ ಹೊಂದಿದ ಪ್ರಯುಕ್ತ ಪ್ರತಿ ವರ್ಷವು ಪಶ್ಚಿಮ ವಾಹಿನಿಯಲ್ಲಿ ಪುಣ್ಮಸ್ಮರಣೆ ಸಲ್ಲಿಸಿ ಸ್ಮಾರಕ ನಿರ್ಮಿಸುವ ಸಂಕಲ್ಪ ಮಾಡುತ್ತಿದ್ದೇವೆಂದು ಶಿವಶಕ್ತಿ ಬಾಲಾಜಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















