Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ಜೈ ಜಗನ್ನಾಥ’ ಘೋಷಣೆಯೊಂದಿಗೆ ಚಿತ್ರದುರ್ಗದಲ್ಲಿ ಜುಲೈ 17 ರಥೋತ್ಸವ; ಭಕ್ತರಿಗೆ ಇಸ್ಕಾನ್ ಆಹ್ವಾನ

---Advertisement---

ಚಿತ್ರದುರ್ಗ, ಜುಲೈ 14 : ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ 4ನೇ ಶ್ರೀ ಜಗನ್ನಾಥ ರಥಯಾತ್ರೆಯನ್ನು ಜುಲೈ 17, ಶುಕ್ರವಾರ ಚಿತ್ರದುರ್ಗ ನಗರದಲ್ಲಿ ಭಕ್ತಿ ಹಾಗೂ ವೈಭವದಿಂದ ಆಯೋಜಿಸಲಾಗಿದೆ. ಈ ಪವಿತ್ರ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಜಗನ್ನಾಥರ ಕೃಪೆಗೆ ಪಾತ್ರರಾಗುವಂತೆ ಇಸ್ಕಾನ್ ಚಿತ್ರದುರ್ಗವು ಸಾರ್ವಜನಿಕರಿಗೆ ಆತ್ಮೀಯ ಆಹ್ವಾನ ನೀಡಿದೆ.

ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು
ರಥಯಾತ್ರೆಯ ಅಂಗವಾಗಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ಜಗನ್ನಾಥ ಲೀಲೆ ಪ್ರವಚನ ನಡೆಯಲಿದ್ದು, ಇಸ್ಕಾನ್ ಚಿತ್ರದುರ್ಗದ ಪ್ರಾದೇಶಿಕ ಕಾರ್ಯದರ್ಶಿ ಹಾಗೂ ಇಸ್ಕಾನ್ ದಕ್ಷಿಣ ಭಾರತ ವಿಭಾಗೀಯ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸುಧೀರ್ ಚೈತನ್ಯ ದಾಸ್ ಅವರು ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ರಥಯಾತ್ರೆಗೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ರಥೋತ್ಸವ ಸಾಗಲಿದೆ.

ರಥಯಾತ್ರೆ ಸಾಗುವ ಮಾರ್ಗ :
ರಥಯಾತ್ರೆಯು ಶ್ರೀ ಕೃಷ್ಣ ಬಲರಾಮ ದೇವಸ್ಥಾನ (ಇಸ್ಕಾನ್ ಚಿತ್ರದುರ್ಗ), ಮಹಾವೀರ ನಗರದಿಂದ ಆರಂಭವಾಗಿ ಎಪಿಎಂಸಿ ಮಂಡಿ, ಮೆದೇಹಳ್ಳಿ ರಸ್ತೆ, ಗಾಂಧಿ ಸರ್ಕಲ್, ಡಿಸಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ರಂಗಯ್ಯನ ಬಾಗಿಲು, ಉಚ್ಚಂಗಿ ಯಲ್ಲಮ್ಮ ದೇವಸ್ಥಾನ ಮುಂಭಾಗ, ಆನೆ ಬಾಗಿಲು, ಹೊಳಲ್ಕೆರೆ ರಸ್ತೆ, ಪ್ರಧಾನ ಅಂಚೆ ಕಚೇರಿ ಮಾರ್ಗವಾಗಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸಮಾಪನಗೊಳ್ಳಲಿದೆ.

ಮಹಾಮಂಗಳಾರತಿ ಮತ್ತು ಮಹಾಪ್ರಸಾದ
ರಥಯಾತ್ರೆ ಬಳಿಕ ರಾತ್ರಿ 8.30ಕ್ಕೆ ಮಹಾಮಂಗಳಾರತಿ ಹಾಗೂ 8.45ರಿಂದ ಮಹಾಪ್ರಸಾದ ವಿತರಣೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಇಸ್ಕಾನ್ ಚಿತ್ರದುರ್ಗದ ವ್ಯವಸ್ಥಾಪಕರಾದ ಶ್ರೀ ವೇಣು ಕೃಷ್ಣ ದಾಸ್, ಇಸ್ಕಾನ್ ಕರ್ನಾಟಕ ಪ್ರಚಾರಕರಾದ ಶ್ರೀ ತ್ರಿವಿಕ್ರಮ ಕೃಷ್ಣ ದಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಥಯಾತ್ರೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಶ್ರೀ ಮಹಾಪಾವನ ಅಚ್ಯುತ ದಾಸ್ ಅವರನ್ನು 99866 03229 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.ಹರೇ ಕೃಷ್ಣ ಮಹಾಮಂತ್ರದ ಘೋಷಣೆ, ಭಜನೆ, ಕೀರ್ತನೆ ಹಾಗೂ ಭಕ್ತಿಯ ವಾತಾವರಣದಲ್ಲಿ ನಡೆಯಲಿರುವ ಈ ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಜಗನ್ನಾಥರ ಆಶೀರ್ವಾದ ಪಡೆಯುವಂತೆ ಇಸ್ಕಾನ್ ಚಿತ್ರದುರ್ಗ ಮನವಿ ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now