Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

KEA UGCET 2026: ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

---Advertisement---

ಬೆಂಗಳೂರು.ಜುಲೈ.14: ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಯುಜಿಸಿಇಟಿ–2026ರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರವು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ಜುಲೈ 9ರ ಬೆಳಿಗ್ಗೆ 11 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ದಾಖಲಿಸಿದ್ದ ಇಚ್ಛೆ ಹಾಗೂ ಆಯ್ಕೆಗಳ (Options) ಆದ್ಯತಾ ಕ್ರಮವನ್ನು ಪರಿಗಣಿಸಿ ಈ ನಿಯಮಾನುಸಾರ ಸೀಟು ಹಂಚಿಕೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

 

ಇಂದೇ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ
ಪ್ರಕಟಿತ ತಾತ್ಕಾಲಿಕ ಫಲಿತಾಂಶದಲ್ಲಿ ಏನಾದರೂ ನಿರ್ದಿಷ್ಟ ಲೋಪದೋಷಗಳು ಕಂಡುಬಂದಲ್ಲಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಟ್‌ಆಫ್ ಅಂಕಗಳು ಮ್ಯಾಚ್ ಆಗುತ್ತಿದ್ದರೂ ಅಥವಾ ಇಚ್ಛೆಗಳನ್ನು ಸರಿಯಾಗಿ ನಮೂದಿಸಿದ್ದರೂ ಯಾವುದೇ ಸೀಟು ಹಂಚಿಕೆಯಾಗದೇ ಇರುವಂತಹ ತಾಂತ್ರಿಕ ತೊಂದರೆಗಳಿದ್ದಲ್ಲಿ, ಸೂಕ್ತ ಆಧಾರಗಳೊಂದಿಗೆ ಜುಲೈ 14ರ ಸಂಜೆ 5:00 ಗಂಟೆಯೊಳಗೆ keauthority-ka@nic.in ಇಮೇಲ್ ವಿಳಾಸಕ್ಕೆ ದೂರು ಕಳುಹಿಸಬಹುದಾಗಿದೆ.

ಆದರೆ, ಅಭ್ಯರ್ಥಿಗಳು ತಮ್ಮ ಕಡೆಯಿಂದ ಆಪ್ಷನ್ ಎಂಟ್ರಿ ಮಾಡದ ಕಾರಣ ಸೀಟು ಸಿಗದೇ ಇದ್ದರೆ ಅಂತಹ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ಅಷ್ಟೇ ಅಲ್ಲದೆ, ಈ ಹಂತದಲ್ಲಿ ಹೊಸದಾಗಿ ಆಯ್ಕೆಗಳನ್ನು ಬದಲಾಯಿಸಲು ಯಾವುದೇ ರೀತಿಯಲ್ಲಿಯೂ ಆಸ್ಪದ ಇರುವುದಿಲ್ಲ. ಸಲ್ಲಿಕೆಯಾಗುವ ಅರ್ಹ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರವೇ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ ರಿಸಲ್ಟ್ ಹೊರಬೀಳಲಿದೆ. ಮುಂದಿನ ಅಪ್‌ಡೇಟ್‌ಗಳಿಗಾಗಿ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್ ಅನ್ನು ನಿರಂತರವಾಗಿ ಗಮನಿಸುತ್ತಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Join WhatsApp

Join Now

Join Telegram

Join Now