ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಉಳಿಕೆ ಮೂಲ (ಮಿಕ್ಕಿಳಿದ) ವೃಂದದಲ್ಲಿ ಖಾಲಿ ಇರುವ ವಿವಿಧ ಜಿಲ್ಲೆ, ನಗರ ಹಾಗೂ ಘಟಕಗಳ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಜನ್ಮದಿನಾಂಕದ ಆಧಾರದ ಮೇಲೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಲಿಕೆ ನೀಡಿದೆ.
ಸಾಮಾನ್ಯ ವರ್ಗ (General Merit): 33 ವರ್ಷಗಳು
SC/ST ಮತ್ತು ಹಿಂದುಳಿದ ವರ್ಗಗಳು: 35 ವರ್ಷಗಳು
ಬುಡಕಟ್ಟು ಅಭ್ಯರ್ಥಿಗಳು: 38 ವರ್ಷಗಳು
ಈ ನೇಮಕಾತಿಯ ಪ್ರಮುಖ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಲಿದ್ದು, ಆಫ್ ಲೈನ್ – ಒ.ಎಂ.ಆರ್. (OMR) ಮಾದರಿಯಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.









