Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

RCB ಮಾರಾಟಕ್ಕಿದೆ.. ತಗೋಳ್ತಾ ಇರೋದು ಇವರೇ : ಇದರಲ್ಲಿ ಸತ್ಯಾಂಶವೆಷ್ಟು..?

---Advertisement---

ಬೆಂಗಳೂರು; ಆರ್ಸಿಬಿ ಟೀಂ ಈಗಷ್ಟೇ ಕಪ್ ಗೆದ್ದು ಸಂತಸದಲ್ಲಿದೆ. ಜೊತೆಗೆ ರಾಜ್ಯದಲ್ಲಿ ನೋವಿದೆ. ಆದರೆ ಇದರ ನಡುವೆ ಆರ್ಸಿಬಿ ಟೀಂ ಮಾರಾಟಕ್ಕಿದೆ ಎಂಬ ಚರ್ಚೆಗಳು ಇದಾವೆ. ಆದರೆ ಇದೀಗ ಅದಕ್ಕೊಂದು ಸ್ಪಷ್ಟನೆ ಸಿಕ್ಕಿದ್ದು, ಈ ವರದಿಯನ್ನ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ತಳ್ಳಿ ಹಾಕಿದೆ. ಈ ಮಾಹಿತಿ ಸುಳ್ಳು, ಇದೊಂದು ಊಹಾಪೋಹ ಎಂದು ಆರ್ಸಿಬಿ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿ ಸ್ಪಷ್ಟ ಪಡಿಸಿದೆ. ಆರ್ಸಿಬಿ ತಂಡದ ಪೂರ್ಣ ಭಾಗವನ್ನಾಗಲಿ, ಭಾಗಶಃ ಭಾಗವನ್ನಾಗಲೀ ಮಾರಾಟ ಮಾಡ್ತಾ ಇಲ್ಲ ಎಂಬುದನ್ನು ಕೂಡ ಹೇಳಿದ್ದಾರೆ.

ಆರ್ಸಿಬಿ ತಂಡ ಮಾರಾಟಕ್ಕಿದೆ ಎಂಬುದನ್ನು ಬ್ಲೂಮ್ ಬರ್ಗ್ ಸಂಸ್ಥೆ ಪ್ರಕಟ ಮಾಡಿತ್ತು. ಕೇಂದ್ರ ಸರ್ಕಾರವೂ ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಆರ್ಸಿಬಿ ತಂಡ ಮಾರಾಟಕ್ಕಿದೆ ಎಂದೇ ಹೇಳಲಾಗಿತ್ತು. ಐಪಿಎಲ್ ನ ಆರಂಭದಿಂದಾನು ಇದ್ದಮನತ ಎಂಟು ತಂಡಗಳಲ್ಲಿ ಆರ್ಸಿಬಿಯೂ ಒಂದಾಗಿದೆ.

ಮೊದಲಿಗೆ ವಿಜಯ್ ಮಲ್ಹ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತ್ತು. ಆ ಬಳಿಕ ಆರ್ಸಿಬಿ ಮಾಲೀಕತ್ವವೂ ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ತಂಡ ಈ ವರ್ಷ ಮೊದಲ ಬಾರುಗೆ ಚಾಂಪಿಯನ್ಸ್ ಒಟ್ಟ ಪಡೆದಿದೆ. ಈ ವರ್ಷ ಆರ್ಸಿಬಿ ಅಭಿಮಾನಿಗಳಿಗೆ ಸಂತಸ ಒಂದು ಕಡೆ ದುಃಖಕರ ಸಂಗತಿ ಮತ್ತೊಂದು ಕಡೆ ಸಿಕ್ಕಿದೆ. ಇದೀಗ ಆರ್ಸಿಬಿ ಟೀಂ ಮಾರಾಟಕ್ಕಿಲ್ಲ ಎಂಬ ಸ್ಪಷ್ಟನೆ ಕೂಡ ಸಿಕ್ಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...