Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಕಿಬಾಯ್ ಬಗ್ಗೆ ಹಗುರವಾಗಿ‌ ಮಾತನಾಡಿದ ರವಿತೇಜ : ಕ್ಷಮೆ ಕೇಳುವಂತೆ ಆಗ್ರಹಿಸಿದ ಯಶ್ ಫ್ಯಾನ್ಸ್

---Advertisement---

 

ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿ ಬರೆದ ದಾಖಲೆ ಅಷ್ಟಿಷ್ಟಲ್ಲ. ಹೊಂಬಾಳೆ ಸಂಸ್ಥೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಎಲ್ಲಾ ಭಾಷೆಯ ಸಿನಿಮಾರಂಗ ತಿರುಗಿ ನೋಡಿತ್ತು. ಯಶ್ ಹಾಕಿದ ಎಫರ್ಟ್ ಗೆ ಎಲ್ಲರೂ ಶಬ್ಬಾಶ್ ಗಿರಿ ಕೊಟ್ಟರು. ಆರೇಳು ವರ್ಷ ಯಶ್ ಕೆಜಿಎಫ್ ಗಾಗಿ ತಮ್ಮ ಶ್ರಮವನ್ನು ಮುಡಿಪಾಗಿಟ್ಟರು. ಆದರೆ ತೆಲುಗು ನಟ ರವಿತೇಜ ಅವರು ಕೆಜಿಎಫ್ ಹಾಗೂ ಯಶ್ ಬಗ್ಗೆ ಉಡಾಫೆಯ ಮಾತುಗಳನ್ನ ಆಡಿದ್ದಾರೆ. ಇದು ಯಶ್ ಫ್ಯಾನ್ಸ್ ಕಣ್ಣು ಕೆಂಪಾಗುವಂತೆ ಮಾಡಿದೆ.

ಸಂದರ್ಶನವೊಂದರಲ್ಲಿ ರ‌್ಯಾಪಿಡ್ ಫೈಯರ್ ಗೆ ಉತ್ತರಿಸಿದ ರವಿತೇಜ ಉಡಾಫೆಯ ಮಾತುಗಳನ್ನಾಡಿದ್ದಾರೆ. ರಾಮ್ ಚರಣ್, ರಾಜಮೌಳಿ ಅವರ ಬಗೆಗೆಲ್ಲ ಒಳ್ಳೆಯ ಮಾತುಗಳನ್ನ ಆಡಿದ್ದಾರೆ. ಅದೇ ಸಮಯಕ್ಕೆ ಯಶ್ ಎಂದು ಕೇಳಿದಾಗ, ನಾನು ಅವರ ಕೆಜಿಎಫ್ ಸಿನಿಮಾ ಮಾತ್ರ ನೋಡಿದ್ದೀನಿ. ಕೆಜಿಎಫ್ ಸಿನಿಮಾ ಸಿಗುವುದಕ್ಕೆ ಅವರು ಅದೃಷ್ಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಯಶ್ ಫ್ಯಾನ್ಸ್ ಅನ್ನು ಕೆರಳಿಸಿದೆ.

ಕೆಜಿಎಫ್ ಸಿಕ್ಕಿದ್ದು ಯಶ್ ಅದೃಷ್ಟದಿಂದಾನ..? ಯಾಕೆ ಯಶ್ ಆರು ವರ್ಷ ತನು ಮನ ಅರ್ಪಿಸಲಿಲ್ವಾ. ಯಾಕೆ ಯಶ್ ಪರಿಶ್ರಮಕ್ಕೆ ಬೆಲೆ ಇಲ್ವಾ ಎಂದೇ ಫ್ಯಾನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರವಿತೇಜ ಅವರು ಕ್ಷಮೆ ಕೇಳಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಷ್ಟೆ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇದೆ. ಇನ್ನು ಕೆಲವರು ಎಚ್ಚರಿಕೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ‘ಟೈಗರ್ ನಾಗೇಶ್ವರ್’ ಕಥೆ ಏನಾಗುತ್ತೆ ಅಂತ ನೋಡುತ್ತಾ ಇರಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment