Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಅಪ್ಡೇಟ್ ಇಲ್ಲಿದೆ

---Advertisement---

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇಂದು (Feb 26) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿದೆ.ರಾಜಸ್ಥಾನದ ಉದಯಪುರದ  ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ನಡೆದಿದೆ.

ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.ತೆಲಂಗಾಣದಿಂದ ವಿಶೇಷವಾಗಿ ಪುರೋಹಿತರ ತಂಡವೊಂದು ಉದಯಪುರಕ್ಕೆ ಆಗಮಿಸಿ, ಎಲ್ಲಾ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು. ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ. ಇಬ್ಬರೂ ಮದುವೆ ನಡೆದಿದೆಯಾದರೂ ಮದುವೆಯ ಅಧಿಕೃತ ಫೋಟೊವನ್ನು ಇನ್ನೂ ಈ ಜೋಡಿ ಹಂಚಿಕೊಂಡಿಲ್ಲ.

ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now