Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಅಪರೂಪದ ಕಂಕಣ ಸೂರ್ಯಗ್ರಹಣ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 16 : ಆಕಾಶದಲ್ಲಿ ಅಪರೂಪವಾಗಿ ಕಾಣಿಸುವ ಖಗೋಳ ಘಟನೆಗಳಲ್ಲಿ ಒಂದಾದ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಇಂದು ( ಫಬ್ರವರಿ 17 ರ ಮಂಗಳವಾರ) ಮಧ್ಯಾಹ್ನ 3.26 ರಿಂದ ಸಂಜೆ 7.57 ರವರೆಗೆ ಜರುಗಲಿದೆ.

ಈ ಅಪರೂಪದ ಖಗೋಳ ಘಟನೆಯ ದೃಶ್ಯ ಕೆಲವೇ ದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಅನೇಕರು ತುಂಬಾ ಆಸಕ್ತಿಯಿಂದ ಕಾಯುತ್ತಿರುವ ವಿಶೇಷ ಕ್ಷಣವಾಗಲಿದೆ. ಈ ಗ್ರಹಣವು ಸುಮಾರು 4 ಗಂಟೆ 30 ನಿಮಿಷಗಳ ನಡೆಯಲಿದ್ದು, 2 ನಿಮಿಷ 20 ಸೆಕೆಂಡ್ ಗಳ ಕಾಲ ಚಂದ್ರನು ಸೂರ್ಯನ ಮದ್ಯಭಾಗವನ್ನು ಮರೆಮಾಡುವ ಮೂಲಕ ವಿಶೇಷ ದೃಶ್ಯ ಮೂಡುತ್ತದೆ. ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಚಂದ್ರನು ಭೂಮಿಯಿಂದ ದೂರದಲ್ಲಿರುವುದರಿಂದ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲು ಸಾಧ್ಯವಾಗದೆ, ಅದರ ಸುತ್ತಲೂ ಬೆಳಕಿನ ಉಂಗುರದಂತೆ ಕಾಣುತ್ತದೆ. ಇದನ್ನು ಕಂಕಣ ಸೂರ್ಯಗ್ರಹಣ ಎನ್ನುವರು.

 

ಇದು ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ತಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ ಮುಂತಾದ ದೇಶಗಳಲ್ಲಿ ಮಾತ್ರ ಈ ಅದ್ಭುತವನ್ನು ವಿಶೇಷ ಉಪಕರಣಗಳ ಮೂಲಕ ನೋಡಿ ಕಣ್ತುಂಬಿ ಕೊಳ್ಳಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...