ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬೆಂಗಳೂರು; ಕಾಮಿಡಿ ಕಿಲಾಡಿಗಳು ಶೋ ಮೂಲಕ ಫೇಮಸ್ ಆಗಿದ್ದಂತ ಮಡೆನೂರು ಮನುಗೆ ಜಾಮೀನು ಮಂಜೂರಾಗಿದೆ. ಅತ್ಯಾಚಾರದ ಆರೋಪದ ಮೇಲೆ ಇಷ್ಟು ದಿನ ಸೆರೆವಾಸದಲ್ಲಿದ್ದ ಮಡೆನೂರು ಮನು ರಿಲೀಸ್ ಆಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಸಹಸ್ಪರ್ಧಿಯಾಗಿದ್ದ ನಟಿಯೇ ಅತ್ಯಾಚಾರದ ದೂರನ್ನು ದಾಖಲಿಸಿದ್ದರು. ಇಂದು ಜಾಮೀನು ಸಿಕ್ಕಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ನಾಳೆ ರಿಲೀಸ್ ಆಗಲಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿದ್ದ ಮಡೆನೂರು ಮನು ಆಗೊಂದು ಈಗೊಂದು ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ರಿಲೀಸ್ ಆದ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗೋದಕ್ಕೂ ಮುನ್ನವೇ ಪೊಲೀಸರ ಅತಿಥಿಯಾಗಿದ್ದರು. ಬಳಿಕ ಮಡೆನೂರು ಮನು ಅವರ ಬಣ್ಣಗಳು ಒಂದೊಂದೆ ಬಯಲಾಗುತ್ತಾ ಹೋದವು. ಇದೀಗ ಜಾಮೀನು ಪಡೆದು ಹೊರಗೆ ಬರ್ತಿದ್ದಾರೆ. ನಾಳೆ ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಲಿದ್ದಾರೆ.
ಮಡೆನೂರು ಮನುಗೆ ಸಿನಿಮಾ ಎಂಬುದು ದೊಡ್ಡ ಕನಸಾಗಿತ್ತು. ಆ ಕನಸಿಗೆ ವಿಕಟಕವಿ, ಎಲ್ಲರ ನೆಚ್ಚಿನ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಬೆಂಬಲ ನೀಡಿದ್ದರು. ಆದರೆ ಮಡೆನೂರು ಮನು ಅರೆಸ್ಟ್ ಆದಮೇಲೆ ಬಂದಂತ ಆಡಿಯೋಗಳಿಂದ ಎಲ್ಲರೂ ಆತನ ವಿರುದ್ಧವೇ ಇದ್ದಾರೆ. ಇನ್ಯಾವತ್ತು, ಯಾರು ಆತನಿಗೆ ಅವಕಾಶ ನೀಡಬಾರದು ಅಂತ ಈಗಾಗಲೇ ಫಿಲ್ಮ್ ಚೇಂಬರ್ ಕೂಡ ನಿರ್ಧಾರ ಮಾಡಿದೆ. ಅದರಲ್ಲೂ ಶಿವಣ್ಣನ ಬಗ್ಗೆ ಮಾತನಾಡಿದ್ದನ್ನ ಇಡೀ ಇಂಡಸ್ಟ್ರಿ ಸಹಿಸಿಲ್ಲ. ಅವರ ಸಾವನ್ನ ಬಯಸಿದ ಮಡೆನೂರು ಮನುಗೆ ಎಲ್ಲರೂ ಧಿಕ್ಕಾರವನ್ನೇ ಕೂಗಿದ್ದಾರೆ. ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ರು, ನಟನೆಯ ಭವಿಷ್ಯದ ಹಾದಿ ಮುಚ್ಚಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್