Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಧಾನಸಭಾ ಚುನಾವಣೆ ಬಳಿಕ ಸೈಲೆಂಟ್ ಆಗಿದ್ದ ರಮೇಶ್ ಜಾರಕಿಹೊಳಿ ಈಗ ಫುಲ್ ಆಕ್ಟೀವ್..!

Facebook
Twitter
Telegram
WhatsApp

 

ಬೆಳಗಾವಿ: ವಿಧಾನಸಭಾ ಚುನಾವಣೆಗೂ ಮುನ್ನ ರಮೇಶ್ ಜಾರಕಿಹೊಳಿ ಸಾಕಷ್ಟು ಕಸರತ್ತು ನಡೆಸಿದ್ದರು. ಮತ್ತೆ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಹಿಂದೆ ಮುಂದೆ ಸುಳಿದಾಡಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ, ಸೈಲೆಂಟ್ ಆಗಿದ್ದರು. ಆದ್ರೆ ಈಗ ಆಪ್ತರೊಟ್ಟಿಗರ ಸೇರಿಕೊಂಡು ಫುಲ್ ಆಕ್ಟೀವ್ ಆಗಿದ್ದಾರೆ.

ಲೋಕಸಭಾ ಚುನಾವಣೆ ಸನಿಹದಲ್ಲಿದೆ. ಹೀಗಾಗಿ ಎಲ್ಲಾ ಪಕ್ಷಗಳು ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಬಿಜೆಪಿ ಸೋಲಿಸಲೇಬೇಕೆಂದು ವಿಪಕ್ಷಗಳೆಲ್ಲ ತಯಾರಿಯಲ್ಲಿದ್ದಾರೆ‌. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಲೋಕಸಭಾ ಚುನಾವಣಾ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ, ಇದೀಗ ರಮೇಶ್ ಜಾರಕಿಹೊಳಿ ಕೂಡ ಹೈಕಮಾಂಡ್ ಭೇಟಿಗೆ ದೆಹಲಿಗೆ ಫ್ಲೈಟ್ ಹತ್ತಿದ್ದಾರೆ. ಆಪ್ತರೊಟ್ಟಿಗೆ ಹೋಗಿ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಸದ್ಯದ ರಾಜಕೀಯ ಅದರಲ್ಲೂ ಬೆಳಗಾವಿ ರಾಜಕೀಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಸೋಲು ಕಂಡಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗೆಲ್ಲಾ ಸ್ಟಾಟರ್ಜಿ ಮಾಡ್ತಾರೆ ಎಂಬ ಕುತೂಹಲವಿದೆ. ಈ ಬಾರಿಯೂ ಬೆಳಗಾವಿಯಲ್ಲಿ ನಾನಾ ನೀ‌ನಾ ಎಂಬ ಯುದ್ಧ ನಡೆದೇ ತೀರುತ್ತೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ಹೆಚ್ಚಿನ ಕಾಳಜಿಯನ್ನೇ ವಹಿಸಬೇಕಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೂ.1ರಿಂದ 6ರವರೆಗೆ ಬಾರ್ ಬಂದ್, ಎಣ್ಣೆ ಸಿಗಲ್ಲ..!

ಬೆಂಗಳೂರು: ಮದ್ಯಪಾನ ಪ್ರಿಯರು ದಿನದಿಂದ ದಿಕ್ಕೆ ಹೆಚ್ಚಾಗುತ್ತಲೆ ಇದ್ದಾರೆ. ಇತ್ತಿಚೆಗೆ ಮದ್ಯಪಾನ ಸೇವನೆ ಅನ್ನೋದು ಕ್ರೇಜ್ ಆಗಿ ಬಿಟ್ಟಿದೆ. ಕೊರೊನಾ ಸಮಯದಲ್ಲಿ ಮದ್ಯಪಾನ ಸಿಗಲ್ಲ ಎಂದಾಗಲೇ ಮಾರುದ್ದ ಕ್ಯೂ ನಿಂತು ತೆಗೆದುಕೊಂಡು ಹೋಗಿದ್ದರು. ಇದೀಗ

ಚಳ್ಳಕೆರೆ | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru, ಚಳ್ಳಕೆರೆ, challakere,   ಸುದ್ದಿಒನ್, ಚಳ್ಳಕೆರೆ,

ಭಾರತೀಯ ವೈದ್ಯಕೀಯ ಸಂಘಕ್ಕೆ 5 ಎಕರೆ ಭೂಮಿ ಕೊಡಿ : ಚಿತ್ರದುರ್ಗ ಜಿಲ್ಲಾ ಶಾಖೆ ಮನವಿ

  ಸುದ್ದಿಒನ್, ಚಿತ್ರದುರ್ಗ, ಮೇ. 24 : ಭಾರತೀಯ ವೈದ್ಯಕೀಯ ಸಂಘ, ಚಿತ್ರದುರ್ಗ ಜಿಲ್ಲಾ ಶಾಖೆಗೆ 5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ನಗರದ ಜಿಲ್ಲಾಧಿಕಾರಿಗಳ

error: Content is protected !!