Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸದನದಲ್ಲಿ ರಾಜಣ್ಣ ರಾಜೀನಾಮೆ ಸದ್ದು : ಬಿಜೆಪಿ ನಾಯಕರಿಂದ ರಾಜಣ್ಣ ಪರ ಬ್ಯಾಟಿಂಗ್

---Advertisement---

ಬೆಂಗಳೂರು: ಮಳೆಗಾಲದ ಅಧಿವೇಶನ ಶುರುವಾಗಿದ್ದು, ನಿನ್ನೆಯಷ್ಟೇ ರಾಜೀನಾಮೆ ನೀಡಿರುವ ರಾಜಣ್ಣ ವುಚಾರ ಸದ್ದು ಮಾಡಿದೆ. ವಿಪಕ್ಷ ನಾಯಕ ಆರ್ ಅಶೋಕ್ ಈ ಸಂಬಂಧ ಸದನದಲ್ಲಿ ಮಾತನಾಡಿದ್ದಾರೆ.

ಒಬ್ಬ ಮಂತ್ರಿ ಅವರನ್ನು ವಜಾ ಆದ ತಕ್ಷಣ, ಸದನ ನಡೆಯುತ್ತಾ ಇದೆ ಈಗ. ಸರ್ಕಾರದ ಕರ್ತವ್ಯ, ಮುಖ್ಯಮಂತ್ರಿಗಳ ಕರ್ತವ್ಯ. ಅದನ್ನ ತಕ್ಷಣವಾಗಿಯೇ, ಸದನ ನಡೆಯುತ್ತಾ ಇರಲಿಲ್ಲ ಅಂದ್ರೆ ನಾವೂ ಕೇಳ್ತಾ ಇರಲಿಲ್ಲ. ಸದನ ನಡೆಯುವಾಗ ಅದನ್ನ ಹೇಳಬೇಕು. ಹೇಳಲೇ‌ ಇಲ್ಲ ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಸ್ಪೀಕರ್ ಸಮಯ ಬಂದಾಗ ಹೇಳ್ತಾರೆ ಎಂದಿದ್ದಾರೆ.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆರ್ ಅಶೋಕ್ ಅವರು, ಹಂಗೆ ಆಗೋದಿಲ್ಲ ಸರ್. ಮುಖ್ಯಮಂತ್ರಿ ಬಂದಾಗ ಸದನ ನಡೆಸುವುದಕ್ಕೆ ಆಗುತ್ತಾ ಸರ್ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪೀಕರ್ ಮಧ್ಯ ಪ್ರವೇಶಿಸಿ ಇದು ಇಂಟರ್ ನಲ್ ವಿಚಾರ ಅಲ್ವಾ ಎಂದಾಗ ಸದನದಲ್ಲಿದ್ದ ಬಿಜೆಪಿ ನಾಯಕರೆಲ್ಲ ಧ್ವನಿಗೂಡಿಸಿದ್ದಾರೆ. ಇದು ಇಂಟರ್ನಲ್ ಮ್ಯಾಟರ್ ಹೇಗೆ ಆಗುತ್ತೆ ಸರ್. ರಾಹುಲ್ ಗಾಂಧಿ ಬಂದು ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದ್ದು, ಆಮೇಲೆ ರಾಜಣ್ಣ ಅವರು ಸತ್ಯ ಹೊರಗೆ ತಂದಾಗ ರಾಜೀನಾಮೆ ವಿಚಾರ ಬಂದಿರೋದು ಇದು ಇಂಟರ್ನಲ್ ಮ್ಯಾಟರ್ ಹೇಗೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎಂಬುದನ್ನ ಸದನದಲ್ಲಿ ಸ್ಪಷ್ಟಪಡಿಸಬೇಕು. ನಾವೇನು ಜಾಸ್ತಿ ಸಮಯವನ್ನ ಕೇಳಲ್ಲ.‌ ಮುಖ್ಯಮಂತ್ರಿಗಳ ಕರ್ತವ್ಯ ಅದು. ನಮ್ಮವರೇ ಷಡ್ಯಂತ್ರ ಮಾಡಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದ್ದಾರೆ. ಸತ್ಯ ಹೇಳಿದ್ದಕ್ಕೋಸ್ಕರ ಅವರನ್ನ ಬಲಿ ಮಾಡಿದ್ರಾ. ಸದನ ನಡೆಯುತ್ತಿರುವಾಗ ಇಂಥ ಮಹತ್ವದ ವಿಚಾರವನ್ನ ಸದನದಲ್ಲಿ ಕೇಳಬೇಕೆ ವಿನಃ, ಮೀಡಿಯಾ ಮೂಲಕ ಕೇಳುವುದಲ್ಲ. ಸದನವನ್ನ ಕತ್ತಲಲ್ಲಿ ಇಡುವುದಲ್ಲ. ಬೆಳಕಲ್ಲಿ ಇಡಿ ಎಂದು ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...