Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಖರ್ಗೆ ಅವರನ್ನ ಭೇಟಿ ಮಾಡಿದ ರಾಜಣ್ಣ, ಸತೀಶ್ ಜಾರಕಿಹೊಳಿ : ಉದ್ದೇಶ ಹೇಳಿದ್ದೇನು ಸಾಹುಕಾರ್..?

---Advertisement---

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನ ಬದಲಾವಣೆ ಎಂಬ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಬಹಳ ಮುಖ್ಯವಾಗಿ ಹೈಕಮಾಂಡ್ ನಾಯಕರನ್ನ ಯಾರೇ ಭೇಟಿ ಮಾಡಿದರು ಅದರ ಹಿಂದೊಂದು ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಇದೀಗ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಉದ್ದೇಶವೇನು ಎಂಬುದರ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಭೇಟಿಯಾಗಿದ್ದೀವ್ರಿ. ರಾಜಣ್ಣ ಜೊತೆಗೆ ಕೆಲ ಶಾಸಕರು ಸೇರಿ ಭೇಟಿ ಮಾಡಿ ಬಂದಿದ್ದೀವಿ. ರೊಟೀನ್ ಆಗಿ ನಮ್ಮ ರಾಜ್ಯದ ರಾಜಕೀಯ, ಪ್ರಸಕ್ತ ಸನ್ನಿವೇಶದ ಬಗ್ಗೆ ಚರ್ಚೆ. ಈಗ ಆಗಿರುವುದು, ಮುಂದಾಗುವಂತಹ ಚರ್ಚೆಯನ್ನ ಮಾಡಿದ್ದೀವಿ. ಕೆಲವೊಂದು ವಿಚಾರವನ್ನು ಅವರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ. ಅವರು ಕೂಡ ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ. ಕಾಯೋಣಾ. ಇವತ್ತು ಅವರು ಕೂಡ ಬೆಂಗಳೂರಿಗೆ ಹೋಗ್ತಾ ಇದ್ದಾರೆ.

ಗೊಂದಲಗಳ ಬಗ್ಗೆ ಅವರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ. ಆದಷ್ಟು ಬೇಗ ನಿರ್ಣಯ ಮಾಡ್ತೀವಿ ಅಂದಿದ್ದಾರೆ. ಈ ಹಿಂದೆ ಕೂಡ ಹೇಳಿದ್ದೀವಿ. ಇದೇನು ಹೊಸದೇನು ಅಲ್ಲ. ಇದು ಬಹಳ ಲೇಟಾಗಿದೆ. ಗೊಂದಲವನ್ನ ಬಗೆಹರಿಸುವಂತೆ ಹೇಳಿದ್ದೇವೆ. ನಾವೂ ಕೂಡ ಒಂದು ಕ್ಲಾರಿಟಿಗೆ ಬಂದಿದ್ದೇವೆ. ಆದಷ್ಟು ಬೇಗ ಬಗೆಹರಿಸುತ್ತೇನೆ ಎಂದಿದ್ದಾರೆ. ನಿರೀಕ್ಷೆ ಏನು ಇಲ್ಲ, ಗೊಂದಲ ಪದೇ ಪದೇ ಆಗುವಂತ ಹೇಳಿಕೆಗಳು, ಅಧಿಕಾರದ ಗೊಂದಲವೆಲ್ಲ ಆಗಬಾರದು. ಇದಕ್ಕೆ ಪೂರ್ಣವಿರಾಮ ಹಾಕಬೇಕು ಅಂತ ಇಡೀ ಪಕ್ಷ ಎದುರು ನೋಡ್ತಾ ಇದೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now