Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯರಿಗೆ ರಾಜಣ್ಣನೆ ಮಾಟ-ಮಂತ್ರ ಮಾಡಿಸಿರಬೇಕು : ಹೆಚ್ ಸಿ ಬಾಲಕೃಷ್ಣ

---Advertisement---

ಬೆಂಗಳೂರು: ನಿನ್ನೆಯಷ್ಟೇ ಕೆ ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನ್ನಾಡುವಾಗ ಯಾರೋ ಮಾಟ ಮಂತ್ರ ಮಾಡಿಸಿರಬೇಕು ಮುಖ್ಯಮಂತ್ರಿಗಳಿಗೆ ಎಂಬ ಮಾತನ್ನ ಹೇಳಿದ್ದರು. ಆ ಮಾತಿಗೆ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು, ರಾಜಣ್ಣನೆ ಮಾಟ ಮಂತ್ರ ಮಾಡಿಸಿರಬೇಕು ಎಂದಿದ್ದಾರೆ.

ಬೇರೆ ಇನ್ನ್ಯಾರು ಮಾಡಿಸುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೇನಾದ್ರೂ ಮಾಟ ಮಂತ್ರ ಮಾಡಿಸೋದಕ್ಕೆ ಶಕ್ತಿ ಅಂತ ಇದ್ದರೆ ಅದು ರಾಜಣ್ಣನಿಗೆ ಮಾತ್ರ. ರಾಜಣ್ಣನವರನ್ನೇ ಈ ಬಗ್ಗೆ ಕೇಳಬೇಕು. ರಾಜಣ್ಣ ಅವರು ಯಾರಿಗಾದರೂ ಮಾಟ ಮಂತ್ರ ಮಾಡಿಸಿ ಅಭ್ಯಾಸ ಇದೆಯಾ. ಏನಾದ್ರೂ ಹೆಚ್ಚು ಕಡಿಮೆ ಮಾಡಿಸಿದರೆ ರಾಜಣ್ಣ ಮಾತ್ರ. ಬೇರೆ ಯಾರಿಗೂ ಆ ಧೈರ್ಯವಿಲ್ಲ. ಮಾಟ ಮಂತ್ರದಿಂದ ನಾವೆಲ್ಲಾ ನಿಯಂತ್ರಣ ಮಾಡ್ತೀವಿ ಅಂದ್ರೆ ಅದು ಮೂರ್ಖತನ. ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿರೋರನ್ನೆಲ್ಲ ಮಾಟ ಮಂತ್ರ ಮಾಡಿಸಿ ಇಳಿಸಿ ಬಿಡಬಹುದಲ್ವಾ. ಸುಮ್ನೆ ಬಾಯಿ ಚಪಲಕ್ಕೆ ಮಾತಾಡಿಕೊಳ್ತಾರೆ. ಅದಕ್ಕೆ ಅರ್ಥ ಇಲ್ಲ.

ವಾಮಾಚಾರಗಳನ್ನ ಮಾಡಿಸ್ತಾರೆ. ಒಂದು ತಿಳಿದುಕೊಳ್ಳಬೇಕು ಯಾರ್ಯಾರು ವಾಮಾಚಾರವನ್ನ ಮಾಡಿಸ್ತಾರೆ ಅವರ ಕುಟುಂಬ ಸರ್ವನಾಶ ಆಗಿದೆ. ಅಂತಹ ಉದಾಹರಣೆಗಳು ಸಾಕಷ್ಟು ಇದೆ. ತಾತ್ಕಾಲಿಕವಾಗಿ ಗ್ರಹಚಾರ ಕೆಟ್ಟಾಗ ಹೆಚ್ಚು ಕಡಿಮೆ ನಡೆಯಬಹುದು. ಪರ್ಮನೆಂಟ್ ಆಗಿ ಮುಗಿಸೋ ಆಗಿದ್ದಿದ್ರೆ ಎಲ್ಲಾರನ್ನು ಮುಗಿಸ್ತಾ ಇದ್ದರು ಎಂದಿದ್ದಾರೆ.

ಇದೇ ವೇಳೆ ಮುಸ್ಲಿಮರ ಅಸಹಾಯಕತೆಯ ಬಗ್ಗೆ ಮಾತನ್ನಾಡಿ, ಜಮೀರ್ ಬಗ್ಗೆ ಬಹುಶಃ ಏನು ಆಗಲ್ಲ. ಅವರವರ ಅಭಿಪ್ರಾಯ ಅವರು ವ್ಯಕ್ತಪಡಿಸುತ್ತೆ. ಅಲ್ಪಸಂಖ್ಯಾತ ಮಾತ್ರ ಯಾಕೆ ಹೇಳ್ತೀರಿ. ಎಲ್ಲಾ‌ ಸಮುದಾಯದವರು ಈ ಬಗ್ಗೆ ಕೇಳ್ತಾರೆ. ಅಲ್ಪಸಂಖ್ಯಾತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಅಭಿಪ್ರಾಯ ಕೇಳಲಿ ಬಿಡಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)