ಬೆಂಗಳೂರು; ಮಂಗಳೂರಿನಲ್ಲಿ ಪಾಕಿಸ್ತಾನದ ಪರ ಕೂಗಿದ ವ್ಯಕ್ತಿ ಒಬ್ಬನನ್ನ ಹತ್ಯೆ ಮಾಡಲಾಗಿದೆ. ಇದೀಗ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬಸವ ಜಯಂತಿ ಪ್ರಯುಕ್ತ ಬಸವಣ್ಣನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಈ ಬಗ್ಗೆ ನಂತರ ಮಾತನಾಡಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಅಂತ ಯಾರೇ ಕೂಗಿದರು ಅದು ತಪ್ಪು. ಅದು ಇನ್ನು ಕೂಡ ವಿಚಾರಣೆ ನಡೆಯುತ್ತಾ ಇದೆ. ಹದಿನೈದು ಜನರ ಮೇಲೆಕೇಸ್ ಹಾಕಿದ್ದಾರೆ. ನೋಡೋಣಾ ರಿಪೋರ್ಟ್ ಬರಲಿ. ಆಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣಾ. ಯಾರೇ ಪಾಕಿಸ್ತಾನದ ಪರವಾಗಿ ಮಾತನಾಡಿದರು ಅದು ತಪ್ಪ, ಅದು ದೇಶದ್ರೋಹ ಗೊತ್ತಾಯ್ತಲ್ಲ ಎಂದಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ವಿಚಾರಣೆ ಕೂಡ ನಡೆಸುತ್ತಿದ್ದಾರೆ. ವರದಿ ಬಂದ ಬಳಿಕ ಈ ಸಂಬಂಧ ಸತ್ಯಾಂಶ ಗೊತ್ತಾಗಲಿದೆ. ಮೊದಲೇ ಪೆಹಲ್ಗಾಮ್ ನಲ್ಲಿ ನಡೆದ ಕ್ರೌರ್ಯದ ಬಿಸಿ ಭಾರತದಲ್ಲಿ ಇನ್ನು ಆರಿಲ್ಲ. ಹೀಗಿರುವಾಗಲೇ ಭಾರತೀಯರನ್ನ ಮತ್ತೆ ಮತ್ತೆ ಕೆಣಕುವುದು ಎಷ್ಟು ಸರಿ ಅನ್ನೋದು ಹಲವರ ಅಭಿಪ್ರಾಯ. ಭಾರತದಲ್ಲಿರುವಾಗ ಶತ್ರು ರಾಷ್ಟ್ರದ ಪರ ಘೋಷಣೆ ಕೂಗಬಾರದು ಅನ್ನೋದು ಗೊತ್ತಿರುವ ವಿಚಾರವೇ. ಹಾಗೇ ಕೂಗಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತೆ ಎಂಬುದು ಕೂಡ ಗೊತ್ತಿರುತ್ತದೆ. ಆದರೂ ಕೆಲವೊಂದಿಷ್ಟು ಕಿಡಿಗೇಡಿಗಳು ಮೊಂಡುತನದ ಪರಮಾವಧಿಯನ್ನ ತೋರಿಸುತ್ತಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದ ಅದೆಷ್ಟೋ ಉದಾಹರಣೆಗಳು ಇದಾವೆ. ಅಂಥವರಿಗೆ ಕಠಿಣ ಶಿಕ್ಷೆಯಾದಾಗ ಮತ್ತಿಷ್ಟು ಕಿಡಿಗೇಡಿಗಳಿಗೆ ಭಯ ಬರಲಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






