ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ12) : ಮಂಗಳವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 40 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 8.8 ಮಿ.ಮೀ, ಚಿಕ್ಕಜಾಜೂರು 2.2 ಮಿ.ಮೀ, ಬಿ. ದುರ್ಗ 3.2 ಮಿ.ಮೀ, ಹೆಚ್ಡಿ ಪುರ 3.6 ಮಿ.ಮೀ, ತಾಳ್ಯ 3 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ 7.2 ಮಿ.ಮೀ, ತಳಕು 1 ಮಿ.ಮೀ, ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 6.4 ಮಿ.ಮೀ, ಬಾಗೂರು 2.2 ಮಿ.ಮೀ, ಮತ್ತೋಡು 9.4 ಮಿ.ಮೀ, ಶ್ರೀರಾಂಪುರದಲ್ಲಿ 3 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 7.2, ಇಕ್ಕನೂರು 5.2 ಮಿ.ಮೀ, ಈಶ್ವರಗೆರೆ 5.2 ಮಿ.ಮೀ, ಬಬ್ಬೂರು 4 ಮಿ.ಮೀ, ಸುಗೂರು 5.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 0.4 ಮಿ.ಮೀ, ಚಿತ್ರದುರ್ಗ-2ರಲ್ಲಿ 1.1 ಮಿ.ಮೀ, ಐನಹಳ್ಳಿ 2.2 ಮಿ.ಮೀ, ಭರಮಸಾಗರ 6 ಮಿ.ಮೀ, ತುರುವನೂರು 2.6 ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.