Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ದಾಳಿ..!

---Advertisement---

ಬಳ್ಳಾರಿ: ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸಿಬಿಐ ಶಾಕ್ ನೀಡಿದೆ. ನಾಗೇಂದ್ರ ಆಪ್ತ ವಿಶ್ವನಾಥ್ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ನಾಲ್ವರು ಅಧಿಕಾರಿಗಳಿಂದ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಯುತ್ತಾ ಇದೆ. ಸಿಬಿಐ ಅಧಿಕಾರಿಗಳು ಬ್ರೂಸ್ ಪೇಟೆ ಠಾಣೆಗೆ ಕುಟುಂಬಸ್ಥರನ್ನ ಕರೆತಂದಿದ್ದಾರೆ. ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಅಧಿಕಾರಿಯೊಬ್ಬರ ಆತ್ಮಹತ್ಯೆಯಿಂದಾಗಿ ನಾಗೇಂದ್ರ ಅವರ ತಲೆದಂಡವಾಗಿತ್ತು. ವಾಲ್ಮೀಕಿ ನಿಗಮದ ಸಚಿವರಾಗಿದ್ದವರು, ತಮ್ಮ ಸಚಿವ ಸ್ಥಾನವನ್ನ ಕಳೆದುಕೊಳ್ಳಬೇಕಾಯ್ತು. ಈ ಸಂಬಂಧ ವಿಚಾರಣೆಯನ್ನು ಎದುರಿಸಿದ್ದರು, ಜೈಲುವಾಸವನ್ನು ಅನುಭವಿಸಿದ್ದರು. ಇದೀಗ ಅವರ ಪರಮಾಪ್ತರಾಗಿರುವ ವಿಶ್ವನಾಥ್ ಅವರ ಮನೆ ಮೇಲೆ ದಾಳಿಯಾಗಿದೆ. ಇದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ದಾಳು ಆಗಿರುವುದು ಯಾಕೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ಇದು ಕೂಡ ಈ ಹಿಂದಿನ ಕೇಸ್ ಗೆ ಸಂಬಂಧಿಸಿದ ದಾಳಿನಾ ಅಥವಾ ಬೇರೆ ಏನಾದರೂ ಕಾರಣವಿದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

 

ವಾಲ್ಮೀಕಿ ನಿಗಮದ ಹಗರಣ ಕೇಸಲ್ಲಿ ಮಾಜಿ ಸಚಿವ ನಾಗೇಂದ್ರ ಅವರ 8.07 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್‌ಗಳಡಿ ನಾಗೇಂದ್ರ ಅವರಿಗೆ ಸೇರಿದ ವಸತಿ, ವಾಣಿಜ್ಯ ನಿವೇಶನ ಮತ್ತು ಕಟ್ಟಡ ಸೇರಿದಂತೆ ನಾಲ್ಕು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಈ ಆಸ್ತಿಗಳ ಮೌಲ್ಯ 8.07 ಕೋಟಿ ರೂ. ಎಂದು ಇ.ಡಿ ಅಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದರು. ಇದೀಗ ಅವರ ಪರಮಾಪ್ತರೇ ಆಗಿರುವ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...