Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುದೀಪ್ ತಾಯಿ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಾಘವೇಂದ್ರ ರಾಜ್‍ಕುಮಾರ್

---Advertisement---

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಇಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದಾರೆ. ಜೆಪಿ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಹಲವು ಗಣ್ಯರು ಸುದೀಪ್ ನಿವಾಸಕ್ಕೆ ಬಂದು ಅವರ ತಾಯಿಯ ಅಂತಿಮ ದರ್ಶನ ಪಡೆದಿದ್ದಾರೆ. ರಾಘವೆಂದ್ರ ರಾಜ್‍ಕುಮಾರ್ ಅವರು ತಮ್ಮ ಮಕ್ಕಳೊಂದಿಗೆ ಬಂದು ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಹಳೆಯ ನೆನಪುಗಳಿಗೆ ಜಾರಿದ್ದಾರೆ.

ಪಾರ್ವತಮ್ಮ ಅವರು ಹಾಗೂ ಸರೋಜಾ ಅವರು ಎಷ್ಟು ಆತ್ಮೀಯರಾಗಿದ್ದರು ಎಂಬುದನ್ನು ಮಾತನಾಡುತ್ತಾ, ರಾಘವೇಂದ್ರ ರಾಜ್‍ಕುಮಾರ್ ಅವರು ಭಾವುಕರಾಗಿದ್ದಾರೆ. ತಾಯಿಯ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೇಡಿಕೊಂಡಿಕೊಂಡಿದ್ದಾರೆ.

‘ಸುದೀಪ್ ಅವರ ತಾಯಿ, ನಮ್ಮ ತಾಯಿ ತುಂಬಾ ವರ್ಚಗಳಿಂದ ಸ್ನೇಹಿತರು. ತುಂಬಾ ವರ್ಷಗಳಿಂದ ಮನೆಗೆ ಬರ್ತಾ ಇದ್ರು, ಒಬ್ಬರಿಗೊಬ್ಬರು ನೋಡ್ತಾ ಇದ್ರು. ಸುದೀಪ್ ಅವರನ್ನ ನೆನೆಸಿಕೊಂಡರೆ ತುಂಬಾ ಕಷ್ಟವಾಗುತ್ತೆ‌. ತಾಯಿ ಇಲ್ಲದೆ ಇದ್ದರೆ, ತಾಯಿ ಕಳೆದುಕೊಂಡ್ರೆ ಎಷ್ಟು ದುಃಖವಾಗುತ್ತೆ ಅನ್ನೋದು ಅರ್ಥ ಆಗುತ್ತೆ. ಜೀವನ ಹೇಗಿರುತ್ತೆ ಎಂಬ ವೇದನೆ ನಾನು ಅನುಭವಿಸಿದ್ದೀನಿ. ಸುದೀಪದ ಅವರು ಈಗ ಆ ವೇದನೆ ಅನುಭವಿಸಬೇಕಲ್ಲ ಎಂಬ ನೋವಿದೆ. ಸುದೀಪ್ ಅವರ ತಾಯಿಯ ಆತ್ಮಕ್ಕೆ ಶಾಂತಿಸಿಗಲಿ ಎಂಬುದೇ ನನ್ನ ಪ್ರಾರ್ಥನೆ. ಸುದೀಪ್ ಅವರಿಗೆ ಈ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದೇ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ಸುದೀಪದ ಅವರ ತಾಯಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದೀಪ್ ಅವರಿಗೂ ಧೈರ್ಯ ತುಂಬಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವು ಕಡಿಮೆ ಏನು ಇರಲ್ಲ. ಅವರ ಅಭಿಮಾನಿಗಳು ಕೂಡ ದೇವರಲ್ಲಿ ಪ್ರಾರ್ಥಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment