ಚಿನ್ನಾಭರಣ ದರೋಡೆ ಕೇಸಲ್ಲಿ ಪಿಎಸ್ಐ ವಜಾ..!

1 Min Read

ದಾವಣಗೆರೆ: ಹರುಷದ ಕೂಳಿಗೆ ವರ್ಷದ ಕೂಳನ್ನ ಕಳೆದುಕೊಂಡರು ಎಂಬ ಗಾದೆ ಮಾತಿದೆ. ದಾವಣಗೆರೆಯಲ್ಲಿ ಈ ಗಾದೆ ಮಾತಿಗೆ ಒಪ್ಪುವಂತ ಘಟನೆಯೇ ನಡೆದಿದೆ ನೋಡಿ. ಇತ್ತೀಚೆಗೆ ನೀವೆಲ್ಲಾ ಕೇಳಿರ್ತೀರಾ ಆಭರಣ ತಯಾರಕರಿಂದ ಸುಮಾರು 78 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ ಕೇಸ್. ಅದರಲ್ಲಿ ಈಗ ಪ್ರೊಬೆಷನರಿ ಐಪಿಎಸ್ ಮಾಳಪ್ಪ ಅವರನ್ನ ಸೇವೆಯಿಂದ ವಜಾ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆ ಆದೇಶವನ್ನು ಹೊರಡಿಸಿದೆ. ಇದೀಗ ಮತ್ತೊಬ್ಬ ಪಿಎಸ್ಐ ಪ್ರವೀಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಜನರಿಗೆ ರಕ್ಷಣೆ ಕೊಡುತ್ತಾರೆ, ಕಳ್ಳರಿಗೆ ದುಸ್ವಪ್ನವಾಗಿರುತ್ತಾರೆ ಎಂದು ನಂಬಿದವರೆ ಈ ರೀತಿ ಕೆಲಸ ಮಾಡಿದಾಗ ಸಾರ್ವಜನಿಕರಿಂದ ಸಹಜವಾಗಿಯೇ ವಿರೋಧ ವ್ಯಕ್ತವಾಗುತ್ತದೆ. ಹೀಗಾಗಿ ಈ ಸಂಬಂಧ ಆದೇಶ ಹೊರಡಿಸಿರುವ ಪೂರ್ವ ವಲಯದ ಐಜಿಪಿ ಬಿ ಆರ್ ರವಿಕಾಂತೇಗೌಡ ಅವರು, ಸಾರ್ವಜನಿಕ ರಕ್ಷಣೆ ನೀಡುವ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವಂತಹ ಬಹುಮುಖ್ಯ, ಜವಾಬ್ದಾರಿ ಲಯುತ ಹುದ್ದೆಯಲ್ಲಿದ್ದುಕೊಂಡು ದರೋಡೆ ಕೃತ್ಯ ಎಸಗಿದ್ದು ಘೋರ ಅಪರಾಧವಾಗಿದೆ. ಮೊದಲ ಆರೋಪಿ ಮಾಳಪ್ಪ ಅವರನ್ನ ವಜಾ ಮಾಡಲಾಗಿದೆ. ಪ್ರವೀಣ್ ಕುಮಾರ್ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾಳಪ್ಪ ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಾ ಇದ್ದರು. ಪ್ರವೀಣ್ ಕುನಾರ್ ರಾಣೇಬೆನ್ನೂರು ಸಂಚಾರ ಠಾಣೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಗೆ ವರ್ಗಾವಣೆಯಾಗಿದ್ದರು. ನವೆಂಬರ್ 24 ರಂದು ನಸುಕಿನಲ್ಲಿ ಕಾರವಾರದ ಅರ್ಕಸಾಲಿ ಅವರಿಂದ ಸುನಾರು 7.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಈಗ ಕೆಲಸದಿಂದಾನೇ ವಜಾಗೊಂಡಿದ್ದಾರೆ.

Share This Article