ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 16 : ಗಾಣಿಗ ಸಮಾಜಕ್ಕೆ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡಿಸಿ ಕೊಡುವಂತೆ ಗಾಣಿಗ ಸಮುದಾಯದ ತಾಲ್ಲೂಕು ಅಧ್ಯಕ್ಷರಾದ ಎ.ಆರ್. ತಿಪೇಸ್ವಾಮಿ ಗಾಣಿಗ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಂಸದರಾದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ರವರಿಗೆ ಮನವಿ ಮಾಡಿದರು.
ಗಾಣಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ಸಮಾಜವು ಹಾಗೂ ಅಲ್ಪಸಂಖ್ಯಾತ ಸಮಾಜವಾಗಿದ್ದು, ಗಾಣಿಗ ಸಮಾಜದ ಸರ್ವಾಂಗೀಣ ಏಳಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆದ್ಯತೆ ನೀಡಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಂಕರ್ಲಾಲ್ ಲೇಔಟ್, ಕೆಳಗೋಟೆ ಗ್ರಾಮದ ರಿ.ಸ.ನಂ; 64/1, 2, 3 & 4 ರ ಚಿತ್ರದುರ್ಗ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತವಾಗಿ ವಸತಿ ವಿನ್ಯಾಸದಲ್ಲಿನ ನಾಗರೀಕ ಸೌಲಭ್ಯ ನಿವೇಶನವು ಚಿತ್ರದುರ್ಗ ನಗರಸಭೆ ವಶದಲ್ಲಿರುತ್ತದೆ. ಸದರಿ ನಾಗರೀಕ ಸೌಲಭ್ಯ ನಿವೇಶನವನ್ನಾಗಲಿ ಅಥವಾ ಚಿತ್ರದುರ್ಗ ನಗರದ ಆಯಕಟ್ಟಿನ ಪ್ರದೇಶದಲ್ಲಾಗಲಿ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಯಾವುದಾದರೂ ಖಾಲಿ ನಿವೇಶನವನ್ನು ಗಾಣಿಗ ಸಮಾಜಕ್ಕೆ ಮಂಜೂರು ಮಾಡಿಸಿಕೊಟ್ಟು ಗಾಣಿಗ ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯ ಮಾಡಬೇಕೆಂದು. ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಞಾನ ಮೂರ್ತಿ, ಉಪಾಧ್ಯಕ್ಷರಾದ ಶಿವಾನಂದ .ಜೆ.ಎಂ., ಸಹ ಕಾರ್ಯದರ್ಶಿ ಮುರುಗೇಶ್, ಮಂಜುನಾಥ್, ಸಂಚಾಲಕರಾದ ವಿರೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ವರದಶಂಕರ್, ಆಶೋಕ್, ನಿರ್ದೇಶಕರುಗಳಾದ ಬಸಣ್ಣ .ಕೆ.ಟಿ.,ವೀರೇಶ್.ಟಿ.,ನಂದೀಶ್.ಜಿ.ಟಿ,ಕಿರಣ್ಶಂಕರ್.ಬಿ.ಜೆ ವೀರಭದ್ರಪ್ಪ.ಎನ್.ಎಂ ಮಂಜುನಾಥ.ಎಸ್ ಮಂಜುನಾಥ್.ಟಿ ಪ್ರಶಾಂತ್.ಬಿ.ಆರ್. ವಿರೂಪಕ್ತ.ಜಿ.ಎನ್. ರವಿ .ಬಿ.ಎನ್. ಬಸವರಾಜು .ಎನ್.ಟಿ ಚನ್ನಬಸಪ್ಪ .ಡಿ.ವಿ ಮಂಜುನಾಥ್.ಎನ್.ಹೆಚ್. ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








