Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ – ಕಾಂಗ್ರೆಸ್ ನಡುವೆ ಪ್ರೋಟೋಕಾಲ್ ವಾರ್ : ಅಶೋಕ್ ಮಾತಿಗೆ ಡಿಸಿಎಂ ಏನಂದ್ರು..?

---Advertisement---

 

ಬೆಂಗಳೂರು: ಇಂದು ಬೆಳಗ್ಗೆನೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿ ಹೋಗಿದ್ದಾರೆ. ಈ ವಿಚಾರವನ್ನಿಟ್ಟುಕೊಂಡು ಬಿಜೆಪಿ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ನವರಿಗೆ ಪ್ರೋಟೋಕಾಲ್ ಕೂಡ ಪಾಲನೆ ಮಾಡುವುದಕ್ಕೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ಅಶೋಕ್ ಅವರ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಅಶೋಕ್ ಗೆ ಸ್ವಲ್ಪ‌ ಪ್ರಾಬ್ಲಮ್ ಇದೆ. ರಾಜಕೀಯ ಭಿನ್ನಾಭಿಪ್ರಾಯ ಇದ್ರು ಪ್ರಧಾನಿಗೆ ಗೌರವ ಕೊಡ್ತೇವೆ. ನಮಗೆ ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ಇದೆ. ಯಾರಿಗೆ ಎಷ್ಟು ಗೌರವ ಕೊಡಬೇಕು ಅನ್ನೋದು ಗೊತ್ತಿದೆ. ನಮ್ಮ ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಇಲ್ಲ. ನಿಮಗೆ ಅರಿವಿಲ್ಲವಾದರೂ ನಮಗೆ ಅರಿವಿದೆ.

ನಾವೂ ಕೇಂದ್ರ ಸರ್ಕಾರದ ಬಳಿ ಕೇಳಿದಾಗ, ಕೇಂದ್ರ ಸರ್ಕಾರವೇ ನಮಗೆ ಬರುವುದು ಬೇಡ ಅಂತ ಹೇಳಿತ್ತು. ಹೀಗಾಗಿ ಹೋಗಿಲ್ಲ. ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದೇವೆ.‌ಅಶೋಕ್ ಗೆ ಒಂದು ಪ್ರಾಬ್ಲಮ್ ಇದೆ ಎಂದು ತಿರುಗೇಟು ನೀಡಿದೆ.

ಇನ್ನು ಆರ್ ಅಶೋಕ್ ಅವರು, ವಿಜ್ಞಾನಿಗಳನ್ನ ಕಂಡ್ರೆ ಕಾಂಗ್ರೆಸ್ ಅವರಿಗೆ ಆಗಲ್ಲ. ಕಳೆದ ಚಂದ್ರಯಾನ ನಿಲ್ಲಿಸಿದ್ರು. ದೇಶ ಮುಂದುವರೆಯಬೇಕು, ರಾಜ್ಯ ಮುಂದುವರೆಯಬೇಕು ಎಂಬ ಮನಸ್ಥಿತಿ ಕಾಂಗ್ರೆಸ್ ಗೆ ಇಲ್ಲ. ವೋಟ್ ಪಡೆಯುವುದಕ್ಕೋಸ್ಕರ ನಡೆದುಕೊಳ್ಳುತ್ತದೆ ಅಷ್ಟೆ. ಪ್ರಧಾನಿ ಬಂದಾಗ ಒಂದು ಪ್ರೋಟೋಕಾಲ್ ಪಾಲನೆ ಮಾಡೋದಕ್ಕೆ ಆಗಲ್ಲ ಎಂದು ಹೇಳಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...