ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 17 : ನಗರದ ಸಂತೇ ಮೈದಾನದ ಲಾಡ್ಜ್ ನ ಮೇಲೆ ಬುಧವಾರ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಂತೆ ಮೈದಾನದ ಶಾಂತಿ ಕಂಪರ್ಟ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್.ಪಿ.ರಂಜಿತ್‌ಕುಮಾರ್ ಬಂಡಾರು, ಎ.ಎಸ್.ಪಿ. ಡಾ. ಶಿವಕುಮಾರ, ಡಿ.ವೈ.ಎಸ್.ಪಿ. ದಿನಕರ್ ಪಿ.ಕೆ. ಇವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪಿ.ಐ. ನಯೀಂ ಅಹಮದ್ ಮತ್ತು ಸಿಬ್ಬಂದಿಯವರ ತಂಡವು ಲಾಡ್ಜ್ ಮೇಲೆ ದಾಳಿ ನಡೆಸಿ ಲಾಡ್ಜ್‌ನ ಮಾಲೀಕರಾದ ಸತೀಶ ಮತ್ತು ಲಾಡ್ಜ್‌ನ ಮ್ಯಾನೇಜರ್ ಕೃಷ್ಣ ಇವರುಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಹಿಳಾ ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವೇಶ್ಯಾವಾಟಿಕೆಯ ಬಗ್ಗೆ ದಾಳಿ ನಡೆಸಿ,ಆರೋಪಿಗಳನ್ನು ಬಂಧಿಸಿದ ಕಾರ್ಯವನ್ನು ಚಿತ್ರದುರ್ಗ ಜಿಲ್ಲೆಯ ಎಸ್.ಪಿ. ರಂಜಿತ್‌ಕುಮಾರ್ ಬಂಡಾರು ರವರು ಶ್ಲಾಘಿಸಿರುತ್ತಾರೆ.





