Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹರಿಹರ ಪಂಚಮಸಾಲಿ ಪೀಠದ ಸುತ್ತ ನಿಷೇಧಾಜ್ಞೆ : ಲೆಕ್ಕ ಕೊಡಿ ಅಭಿಯಾನ

---Advertisement---

ದಾವಣಗೆರೆ: ಪಂಚಮಸಾಲಿ ಮಠದ ಅನುದಾನ, ದೇಞಿಗೆ ಗೋಲ್ಮಾಲ್ ಆರೋಪ ಸಂಬಂಧ ಹರಿಹರ ಪಂಚಮಸಾಲಿ ಮಠದಲ್ಲಿ ಸಭೆ ನಡೆಸಲಾಗ್ತಾ‌ ಇದೆ. ಈ ಸಭೆಯಲ್ಲಿ 28 ಜನ ಟ್ರಸ್ಟಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಇದೆ. ಪಂಚಮಸಾಲಿ ಮಠದ ಅನುದಾ‌ ದುರ್ಬಳಕೆಯಾಗ್ತಾ ಇರುವ ಕಾರಣ ಮಠದ ಎದುರು ಪ್ರತಿಭಟನೆಗೆ ಕೂಡ ಮುಂದಾಗಿದ್ದಾರೆ.

ದೇಣಿಗೆಯಲ್ಲಿ ಗೋಲ್ಮಾಲ್, ಆಡಿಟಿಂಗ್ ಮಾಡಿಲ್ಲ ಎಂಬ ವಿಚಾರ. ಭಕ್ತರ ಪ್ರತಿಭಟನೆ ಜೋರಾದ ಬೆನ್ನಲ್ಲೇ ಮಠದಲ್ಲಿ ಸಭೆಯನ್ನ ನಡೆಸಲಾಗ್ತಾ ಇದೆ. ಇಷ್ಟೆಲ್ಲಾ ಆಗ್ತಾ ಇದ್ದರು ವಚನಾನಂದ ಸ್ವಾಮೀಜಿ ಮಠದ ಒಳಗೆ ಇದ್ದಾರೆ. ಪ್ರತಿಭಟನೆ ಕೂಡ ಜೋರಾಗಿರುವ ಕಾರಣ ಮಠದ ಸುತ್ತೆಲ್ಲ ಬಿಗಿ ಬಂದೋಬಸ್ತ್ ಮಾಡಲಾಗಿದೆ, ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ. ಲೆಕ್ಕ ಕೊಡಿ ಅಭಿಯಾನವನ್ನ ಶುರು ಮಾಡಿದ ಪ್ರತಭಟನಾಕಾರರಿಗೆ ಸಮರ್ಥನೆಯ ಉತ್ತರ ನೀಡಿದ್ದಾರೆ. ಭಕ್ತರು ಕೊಟ್ಟ ಹಣ ಆಗಿರಬಹುದು, ಸರ್ಕಾರದಿಂದ ಬಂದ ದೇಣಿಗೆಯಾಗಿರಬಹುದು ಎಲ್ಲವೂ ಸದ್ಭಳಕೆಯಾಗಿದೆ. ನಾವೂ ಸರಿಯಾದ ಸಮಯಕ್ಕೆ ಆಡಿಟಿಂಗ್ ಮಾಡ್ತಾ ಇದ್ದೀವಿ ಎಂಬ ಉತ್ತರವನ್ನ ನೀಡಿದ್ದಾರೆ ಆಡಳಿತ ಮಂಡಳಿ.

ಆದರೆ ಈ ಮಾತನ್ನ ಭಕ್ತರು ಒಪ್ಪುತ್ತಿಲ್ಲ. ಎಲ್ಲವೂ ಸರಿಯಾಗಿದ್ದಿದ್ದರೆ ಭಕ್ತರಿಗೆ ಲೆಕ್ಕ ಕೊಡಿ, ದಾಖಲೆಗಳನ್ನ ತೋರಿಸಿ ಎಂಬ ಮಾತನ್ನ ಹೇಳಿದ್ದಾರೆ. ಮಠದ ಮುಂದೆ ಪ್ರತಿಭಟನೆಯ ಕಾವೂ ಏರಿದೆ. ಪೊಲೀಸರು ಕೂಡ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ. ಮಾಜಿ ಶಾಸಕರಾದ ಹೆಚ್ ಎಸ್ ಶಿವಶಂಕರ, ಅರುಣ‌ಕುಮಾರ್, ಹೂವಿನ ಅಡಗಲಿಯ ಹಾಲಪ್ಪ ಸೇರಿದಂತೆ ಪ್ರಮುಖರಿಂದ ಈ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಹಶಿಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆಯನ್ನ ಜಾರಿಗೊಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now