ಸುದ್ದಿಒನ್, ಸಿರಿಗೆರೆ, ಸೆಪ್ಟೆಂಬರ್. 23 : ಸಿರಿಗೆರೆಯ ಶ್ರೀಮಠದ ಆವರಣದಲ್ಲಿ ಶನಿವಾರ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮ ಅಂಗವಾಗಿ ಶ್ರೀಗಳ ಪ್ರತಿಮೆಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮಠಕ್ಕೆ ಕೊಡುಗೆ ನೀಡಿದ್ದ ರೋಬೊಟಿಕ್ ಆನೆ ಶಿವಕುಂಜರವು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ ಆದರೆ ಕೊಂಬುಕಹಳೆ, ನಾಸಿಕ್‍ಡೋಲ್, ಗಾರುಡಿ ಗೊಂಬೆ, ತ್ರಾಶ್‍ವಾದ್ಯ, ವೀರಗಾಸೆ, ನಗಾರಿ, ಗೊರವರ ಕುಣಿತ, ತ್ರಾಶ್, ಡೋಲ್ ಹಾಗೂ ಮುಚ್ಚನೂರು, ಕಂದಗಲ್ಲು, ಚಿತ್ರದುರ್ಗ, ದಾವಣಗೆರೆ, ಹರಪ್ಪನಹಳ್ಳಿ ಸೇರಿದಂತೆ ನಾನಾ ಭಾಗದ ಭಕ್ತರು, ಕಲಾತಂಡಗಳಾದ ಸಮಾಳ, ನಂದಿಕೋಲು ಕುಣಿತ, ಭಜನೆ ಮಾಡುವುದರ ಮೂಲಕ ಮೆರವಣಿಗೆಯಲ್ಲಿ ಗಮನ ಸೆಳೆದರು. ಮಠದ ವಿದ್ಯಾರ್ಥಿಗಳು, ಗ್ರಾಮಸ್ಥರು ಶಿಸ್ತು ಬದ್ಧವಾಗಿ ಪಥದಲ್ಲಿ ಸಾಗಿದರು. ತುಂತುರು ಮಳೆಯು ಭಕ್ತಿ ಸಮರ್ಪಿಸಿತು. ಕಂದಗಲ್ಲು ಗ್ರಾಮದ ಎತ್ತಿನ ಬಂಡಿಯಲ್ಲಿ ಲಿಂ. ಶಿವಕುಮಾರ ಶ್ರೀಗಳ ಫೆÇೀಟೋ ಮೆರವಣಿಗೆಯಲ್ಲಿ ನೊಡುಗರ ಮನ ಸೆಳೆಯಿತು.
500ಕ್ಕೂ ಹೆಚ್ಚು ಪೆÇಲೀಸ್ ಸಿಬ್ಬಂದಿಯವರು ಶಿಸ್ತು ಪಾಲನೆ ಮಾಡಲಿದ್ದು, ಶ್ರೀಮಠದ ಐಕ್ಯಮಂಟಪದ ಆವರಣ, ಶಾಲಾ-ಕಾಲೇಜಿನ ಕಟ್ಟಡಗಳು, ಬ್ಯಾಂಕ್, ಗ್ರಾಮದ ಪ್ರಮುಖ ಬೀದಿಗಳು ಹಾಗೂ ಗುರುಶಾಂತೇಶ್ವರ ಭವನವು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುವುದರ ಜೊತೆಗೆ ಶಿವದ್ವಜಗಳು ರಾರಜಿಸಿದವು.
ಸಿರಿಗೆರೆಯ ಶ್ರದ್ಧಾಂಜಲಿ ಸಮಾರಂಭ : ನಾಳೆ (ಬುಧವಾರ, ಸೆ.24ರ ಬುಧವಾರ) ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶ್ರೀಗಳ ಕತೃ ಗದ್ದಿಗೆಯಲ್ಲಿ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶ್ರೀಗಳಿಂದ ಪುಷ್ಪ ನಮನ, 10.30ಕ್ಕೆ ಶಿವ ಧ್ವಜಾರೋಹಣ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.
ಬೆಳಿಗ್ಗೆ 11 ಗಂಟೆಗೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ ಅವರು ಗುರುವಂದನೆ ಸಲ್ಲಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತ್ ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಕೃಷ್ಣಭೈರೇಗೌಡ, ಎಸ್.ಎಸ್.ಮಲ್ಲಿಕಾರ್ಜುನ್, ಡಿ.ಸುಧಾಕರ್,, ಜಿ.ಎಂ.ಸಿದ್ದೇಶ್ವರ, ಶಾಸಕರಾದ ಯು.ಬಿ.ಬಣಕಾರ, ಡಿ.ಜಿ.ಶಾಂತನಗೌಡ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಹೆಚ್.ಡಿ.ತಮ್ಮಯ್ಯ, ಶಿವಗಂಗಾ ಬಸವರಾಜ್, ಪ್ರಕಾಶ್ ಕೋಳಿವಾಡ, ಮಾಜಿ ಸಚಿವರಾದ ಹೆಚ್.ಆಂಜನೇಯ ಭಾಗವಹಿಸಲಿದ್ದು, ನಿವೃತ್ತ ಪ್ರಾಚಾರ್ಯರಾದ ಡಾ.ನಾ.ಲೋಕೇಶಒಡೆಯರ್ ಅವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಅಸಾಧಾರಣ ಸಾಧನೆಯ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ ಹಾಗೂ ತರಳಬಾಳು ಕಲಾ ಸಂಘದಿಂದ ವಚನ ನೃತ್ಯಗಳು ಪ್ರದರ್ಶನಗೊಳ್ಳಲಿವೆ.
ಕೃತಿಗಳ ಲೋಕಾರ್ಪಣೆ.
ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳಾದ ಕದಲಿ ಕ ಕರ್ಪೂರ್, ಶಿವಸಿರಿ ಮಹಾಕಾವ್ಯ, ಭರಮಸಾಗರ ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ 2025 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.



