ಬೆಂಗಳೂರು: ಇಂದು ಮಾಜಿ ಸಿಎಂ ಕುಮಾರಸ್ವಾಮಿ ವಿದೇಶದಿಂದ ಬಂದಿದ್ದಾರೆ. ಈ ವೇಳೆ ಏರ್ಪೋರ್ಟ್ ನಲ್ಲಿ ಮಾತನಾಡಿದ ಕುಮಾರಸ್ವಾಮಿ, ಪೆನ್ ಡ್ರೈವ್ ಈಗಲೇ ರಿಲೀಸ್ ಮಾಡಲ್ಲ ಎಂದಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ನವರು ಈಗ ಅಸ್ತಿತ್ವ ಕಳೆದುಕೊಂಡು ಬಿಟ್ಟಿದ್ದಾರೆ. ಮುಳುಗಿ ಹೋಗಿದ್ದಾರೆ. ಆ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರಾಗಲಿ ಈ ರೀತಿ ಮಾತನಾಡುತ್ತಿದ್ದಾರೆ ಎನಿಸುತ್ತಿದೆ. ಬಿಜೆಪಿಯವರಂತು ಹತಾಶರಾಗಿದ್ದಾರೆ. ಪ್ಲೇಯಿಂಗ್ ಲೆವೆಲ್ ನಲ್ಲಿ ಕ್ಯಾಪ್ಟನ್ ನ ಹುಡುಕಿದರೆ, ಇವರು ಬೇರೆಯದ್ದೇ ರೀತಿಯಲ್ಲಿ ಹುಡುಕುತ್ತಿದ್ದಾರೆ.
40% ಸರ್ಕಾರ ಅಂತ ಎನಿಸಿಕೊಂಡವರು ಅವರು. 40% ಸರ್ಕಾರ ಇದ್ದಾಗ ಇವರು ಯಾಕೆ ಮಾತನಾಡಲಿಲ್ಲ. ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಕೂಡ ಹೇಳಿದ್ದಾರೆ. ಪೆನ್ ಡ್ರೈವ್ ಪೆನ್ ಡ್ರೈವ್ ಅಂತಾರೆ. ಎಲ್ಲಿ ಹೋಯ್ತಪ್ಪ ಪೆನ್ ಡ್ರೈವ್. ಇವತ್ತು ನೋಡಿದ್ರೆ ಬಿಡುಗಡೆ ಮಾಡಲ್ಲ ಅಂತಿದ್ದಾರೆ. ಬಿಡುಗಡೆ ಮಾಡಿ ನಾವೂ ತನಿಖೆ ಮಾಡ್ತೀವಿ. ಎಸ್ ಪಿ ರೋಡಲ್ಲಿ ಎಷ್ಟು ಪೆನ್ ಡ್ರೈವ್ ಸಿಗಲ್ಲ. ಸುಮ್ಮನೆ ಕಂಟೆಂಟ್ ಇಲ್ಲದೆ ಏನನ್ನು ಮಾತನಾಡಬಾರದು ಜೆಡಿಎಸ್ ಅವರು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















