ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುಪಾಲಾಗಿದ್ದಾರೆ. ಅವರ ಅಭಿಮಾನಿಗಳು ಸಾವಿರಾರು ಮಂದಿ ಇದ್ದಾರೆ. ತಮ್ಮ ಬಾಸ್ ಆದಷ್ಟು ಬೇಗ ಹೊರಗೆ ಬರಲಿ ಎಂದೇ ಸೆಲೆಬ್ರಿಟಿಗಳು ಬಯಸಿದ್ದಾರೆ. ಇದೀಗ ದರ್ಶನ್ ಅಂದ್ರೆ ನನಗೂ ಇಷ್ಟ ಅಂತ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ದರ್ಶನ್ ಅವರು ಜೈಲಿನಲ್ಲಿಯೇ ಇದ್ದರು ಅವರ ಸಿನಿಮಾ ಡೆವಿಲ್ ಪ್ರಮೋಷನ್ ಆಗ್ತಾ ಇದೆ. ಅವರ ಅಭಿಮಾನಿಗಳು ಹಾಗೂ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಸೇರಿ ಪ್ರಮೋಷನ್ ಮಾಡುತ್ತಿದ್ದಾರೆ. ಈ ಮೊದಲು ಡಿಸೆಂಬರ್ 12 ರಂದು ರಿಲೀಸ್ ಎಂಬುದನ್ನ ಹೇಳಲಾಗಿತ್ತು. ಆದರೆ ಈಗ ಒಂದು ದಿನ ಮೊದಲೇ ಅಂದ್ರೆ ಡಿಸೆಂಬರ್ 11 ರಂದೇ ಸಿನಿಮಾ ರಿಲೀಸ್ ಆಗ್ತಾ ಇದೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಪೋಸ್ಟರ್ ಒಂದನ್ನ ರಿಲೀಸ್ ಮಾಡಿ, ಹಾರೈಸಿದ್ದಾರೆ.
ಬಳಿಕ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಕೂಡ ದರ್ಶನ್ ಅಭಿಮಾನಿ. ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದ್ರೆ ಅತೀ ಹೆಚ್ಚು ಫ್ಯಾನ್ಸ್ ಇರೋದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ಮೆಜೆಸ್ಟಿಕ್, ಕರಿಯ ಆ ಕಾಲದ ಸಿನಿಮಾಗಳನ್ನ ನೋಡುತ್ತಾ ಬಂದಿದ್ದೇನೆ. ಕೆಂಚಾಲೋ ಮಂಚಾಲೋ ಸಾಂಗ್ ಕ್ರೇಜ್ ಹುಟ್ಟಿಸಿತ್ತು. ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ. ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ ಬೆಳವಣಿಗೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಡಿಸೆಂಬರ್ 12 ರಿಲೀಸ್ ಆಗಬೇಕಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ 11ಕ್ಕೆ ರಿಲೀಸ್ ಆಗ್ತಿದೆ ಎಂದಿದ್ದಾರೆ.
