Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಪಾಸ್ ಬರುತ್ತಿರುವ ಪ್ರಜ್ವಲ್ ರೇವಣ್ಣ : ಏರ್ಪೋರ್ಟ್ ನಲ್ಲೇ ಎಸ್ಐಟಿ ಠಿಕಾಣಿ : ಮಧ್ಯರಾತ್ರಿಯೇ ಅರೆಸ್ಟ್ ಆಗ್ತಾರಾ..?

---Advertisement---

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎಸ್ಕೇಪ್ ಆಗಿದ್ದರು‌. ಎಸ್ಐಟಿ ತನಿಖೆ ನಡೆಸಲು ಎಷ್ಟು ಸಲ ನೋಟೀಸ್ ನೀಡಿದರು ಅದಕ್ಕೆ ಜಪ್ಪಯ್ಯ ಎಂದಿರಲಿಲ್ಲ. ಇದೀಗ ಮೇ 30 ಅಂದರೆ ನಾಳೆ ರಾಜ್ಯಕ್ಕೆ ಬಂದು ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದೀಗ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದೆ.

ಪ್ರಜ್ವಲ್ ರೇವಣ್ಣ ಇಷ್ಟು ದಿನ ತಲೆಮರೆಸಿಕೊಂಡಿದ್ದಾರೆ. ಈಗ ಬಂದು ದೇಶದ ಒಳಗೆ ತಲೆ‌ಮರೆಸಿಕೊಂಡರೆ ಎಂಬ ಪ್ರಶ್ನೆ ಎಸ್ಐಟಿ ಅಧಿಕಾರಿಗಳದ್ದು. ಸದ್ಯ ಅಲರ್ಟ್ ಆಗಿರುವ ಎಸ್ಐಟಿ ಅಧಿಕಾರಿಗಳು ಏರ್ಪೋರ್ಟ್ ನಲ್ಲಿಯೇ ಕಾಯುತ್ತಿದ್ದಾರೆ. ಲುಫ್ತಾನ್ಸಾ ಏರ್ಲೈನ್ಸ್ ನಲ್ಲಿ ಪ್ರಜ್ವಲ್ ರೇವಣ್ಣ ಟಿಕೆಟ್ ಕಾಯ್ದಿರಿಸಿದ್ದಾರೆ‌. ಈಗಾಗಲೇ ಎರಡು ಬಾರಿ ಟಿಕೆಟ್ ಬುಕ್ ಮಾಡಿ ಪ್ರಜ್ವಲ್ ರೇವಣ್ಣ ಕ್ಯಾನ್ಸಲ್ ಮಾಡಿದ್ದರು. ಹೀಗಾಗಿಯೇ ಎಸ್ಐಟಿ ಅಧಿಕಾರಿಗಳು ಏರ್ಪೋರ್ಟ್ ನಲ್ಲಿಯೇ ಬೀಡು ಬಿಟ್ಟಿದ್ದಾರೆ.

ಪ್ರಜ್ವಲ್ ರೇವಣ್ಣ ಬಂದ ಕೂಡಲೇ ಎಸ್ಐಟಿ ತನ್ನ ವಶಕ್ಜೆ ಪಡೆದುಕೊಳ್ಳಲಿದೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ, ವಿಚಾರಣೆ ನಡೆಸಲಿದೆ. ಈಗಾಗಲೇ ಸಾಕಷ್ಟು ಹೆಣ್ಣು ಮಕ್ಕಳು ದೂರು ದಾಖಲಿಸಿದ್ದಾರೆ. ಪ್ರಜ್ವಲ್ ಅರೆಸ್ಟ್ ಆದ ಮೇಲೆ ಅವರೆಲ್ಲರ ಹೇಳಿಕೆಯನ್ನು ಮತ್ತೆ ಪಡೆಯಲಿದೆ. ಇಷ್ಟು ದಿನ ಎಸ್ಐಟಿ ಅಧಿಕಾರಿಗಳಿಗೂ ಸಿಗದೆ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋ ಕೇಸಿನ ತನಿಖೆ ಇನ್ಮುಂದೆ ಚುರುಕುಗೊಳ್ಳಲಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಪಾಲಾಗ್ತಾರಾ ಅಥವಾ ಜಾಮೀನು ತೆಗೆದುಕೊಂಡು ಹೊರಗೆ ಇರುತ್ತರಾ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment