Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಜ್ವಲ್ ರೇವಣ್ಣ ಇಷ್ಟು ದಿನ ಡಿಪ್ರೆಶನ್ ಹೋಗಿಬಿಟ್ಟಿದ್ರಂತೆ..!

---Advertisement---

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಚಲ್ ರೇವಣ್ಣ ಇಂದು ವಿಡಿಯೋ ಮೂಲಕ ಪತ್ತೆಯಾಗಿದ್ದಾರೆ. ಎಸ್ಐಟಿ ಎಷ್ಟೇ ನೋಟೀಸ್ ಕೊಟ್ಟರು ಅದಕ್ಕೂ ಅವರ ವಕೀಲರೇ ಉತ್ತರಿಸಿದ್ದರು. ಇಂದು ವಿದೇಶದಲ್ಲಿದ್ದುಕೊಂಡೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಇಷ್ಟು ದಿನ ತಾನೂ ಡಿಪ್ರೆಶನ್ ಹೋಗಿದ್ದೆ ಎಂಬ ವಿಚಾರ ತಿಳಿಸಿದ್ದಾರೆ.

‘ಮೇ 26ಕ್ಕೆ ನಾನು ಫಾರಿನ್ ಹೋಗುವುದು ಮೊದಲೇ‌ ಫಿಕ್ಸ್ ಆಗಿತ್ತು. ನಾನು ಹೋಗುವ ದಿನ ನನ್ನ ಮೇಲೆ ಕೇಸ್ ಆಗಿರಲಿಲ್ಲ. ನನ್ನ ಮೇಲೆ ಆರೋಪ ಬರುತ್ತಿದ್ದಂತೆ ರಾಹುಲ್ ಗಾಂಧಿ ಹಾಗೂ ಇತರೇ ಕಾಂಗ್ರೆಸ್ ನಾಯಕರು ಇದನ್ನು ಪ್ರಚಾರ ಮಾಡಿದರು. ರಾಜಕೀಯ ಪಿತೂರಿ ಮಾಡಿದರು. ಇವೆಲ್ಲ ತಿಳಿದು ನಾನು ಡಿಪ್ರೆಶನ್ ಹೋಗಿದ್ದೆ, ಐಸೋಲೇಶನ್ ನಲ್ಲಿ ಇದ್ದೆ. ಫಾರಿನ್ ಗೆ ಹೋದ ಎರಡು ಮೂರು ದಿನದ ಬಳಿಕ ಚಾನೆಲ್ ನೋಡಿ ಮಾಹಿತಿ ಸಿಕ್ಕಿದೆ. ಎಸ್ಐಟಿ ನೋಟೀಸ್ ಕೊಟ್ಟಿದೆ. ಅದಕ್ಕೆ ನಾನು ಟ್ವಿಟ್ಟರ್ ಹಾಗೂ ಲಾಯರ್ ಮೂಲಕ ಏಳು ದಿನಗಳ ಕಾಲವಕಾಶ ಕೇಳಿದ್ದೆ. ಅದಾದ ಮೇಲೆ ರಾಹುಲ್ ಗಾಂಧಿ ಹಾಗೂ ಇತರೆ ನಾಯಕರು ಇದನ್ನು ಪ್ರಚಾರ ಮಾಡಿದರು. ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದರು.

ಹಾಸನದಲ್ಲಿ ಕೆಲವು ಶಕ್ತಿಗಳು ಒಟ್ಟಿಗೆ ಸೇರಿ ಪಿತೂರಿ ಮಾಡಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿದ್ದೇನೆ, ಮುಗಿಸಬೇಕು ಅಂತ ಷಡ್ಯಂತ್ರ ಮಾಡಿದ್ದಾರೆ. ಇದರಿಂದ ಆಘಾತ ಆಗಿ, ನಾನೇ ಚೂರು ದೂರ ಇದ್ದೆ. ಇದರ ಬಗ್ಗೆ ಯಾರೂ ತಪ್ಪು ತಿಳಿಯಬೇಡಿ. ಮೇ 31ರಂದು ನಾನೇ ಖುದ್ದಾಗಿ ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment