ದಾವಣಗೆರೆ: ಹೆಣ್ಣು ಮಕ್ಕಳಿಗೆ ಭದ್ರತೆ ಅನಿವಾರ್ಯತೆ. ಕೆಲವೊಂದಿಷ್ಟು ಕೆಟ್ಟ ಪುರುಷರಿಂದ, ಸರಗಳ್ಳರಿಂದ ಹೀಗೆ ಹಲವು ರೀತಿಯ ಭದ್ರತೆಗಳು ಬೇಕಾಗಿದೆ. ಇದೀಗ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಅಕ್ಕ ಪಡೆ ಸಿದ್ಧವಾಗಿದೆ. ರಾಜ್ಯದೆಲ್ಲೆಡೆ ಸರ್ಕಾರ ಅಕ್ಕ ಪಡೆಯನ್ನ ಸ್ಥಾಪಿಸಿದೆ. ದಾವಣಗೆರೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಚಾಲನೆ ನೀಡಿದರು.
ಈ ಸಂಬಂದ ಮಹಿಳಾ ಪೊಲೀಸ್ ಅಧಿಕಾರಿ ಮಾತನಾಡುತ್ತಾ, ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕ್ಕ ಪಡೆ ಯೋಜನೆಯನ್ನ ತಂದಿದೆ. ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಕಾಳಜಿವಹಿಸಲಾಗುತ್ತದೆ. ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗೃತಿಯನ್ನ ಮೂಡಿಸುವಂತದ್ದು. ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆ, ಸೈಬರ್ ಕ್ರೈಮ್ ಬಗ್ಗೆ ನಮ್ಮ ಸಹಾಯವಾಣಿಗಳ ಬಗ್ಗೆ ಜಾಗೃತಿಯನ್ನ ಮೂಡಿಸುವಂತ ಕೆಲಸವಾಗುತ್ತದೆ. ಹೆಚ್ಚಾಗಿ ಶಾಲಾ – ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹೋಮ್ ಗಾರ್ಡ್ ಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ತರಬೇತಿಯನ್ನು ನೀಡುತ್ತೇವೆ ಎಂದಿದ್ದಾರೆ.
ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನ್ನಾಡಿ, ಇಂದು ನಮ್ಮ ದಾವಣಗೆರೆಯಲ್ಲಿ ಅಕ್ಕ ಪಡೆಗೆ ಚಾಲನೆ ನೀಡಲಾಯಿತು. ಇದು ಸಂಪೂರ್ಣವಾಗಿ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಾರಿಗೆ ತಂದಿರುವಂತದ್ದು. 1098, 112, 1903 ಗೆ ಕರೆ ಮಾಡಿದ್ರೆ, ತಕ್ಷಣ ನಮ್ಮ ತಂಡ ಹೋಗಿ ಸಹಾಯ ಮಾಡುತ್ತೆ. ಈ ಅಂವಂಧ ಅಪ್ಡೇಟ್ ಅನ್ನ ಆಗಾಗ ಮೀಟಿಂಗ್ ಮಾಡಿ ಎಲ್ಲಾ ಶಾಸಕರು, ಸಂಸದರ ಸಭೆಯಲ್ಲಿ ಪಡೆದುಕೊಳ್ಳುತ್ತೇವೆ. ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ನಂಬರ್ ಸೇವ್ ಮಾಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
















