Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ನಗರ ಉಪ ವಿಭಾಗ ಘಟಕ-2 ರ ವ್ಯಾಪ್ತಿಯಲ್ಲಿ ಬರುವ ಎಫ್-8 ವಿದ್ಯಾನಗರ ಮತ್ತು ಎಫ್-15 ಮಿಲ್ ಏರಿಯಾ ಮಾರ್ಗದ ಜೆ.ಎಮ್.ಐ.ಟಿ ವೃತ್ತದ ಮುಂಭಾಗದಲ್ಲಿ ಕಾಮಗಾರಿಗೆ ಅಡ್ಡಲಾಗಿರುವ 11ಕೆವಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಗರಸಭೆ ಚಿತ್ರದುರ್ಗ ಇವರು ನಿರ್ವಹಿಸುತ್ತಿದ್ದು, ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಫೆಬ್ರವರಿ 23 ಮತ್ತು 24 ರಂದು)  ಬೆಳಗ್ಗೆ 10.00 ರಿಂದ ಸಂಜೆ 05.00 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಲು ಕೋರಲಾಗಿದೆ. ಈ ಕೆಳಗೆ ತಿಳಿಸಿರುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಫೆಬ್ರವರಿ 23 ರಂದು ಬೆಳಗ್ಗೆ 10.00 ರಿಂದ ಸಂಜೆ 05.00ರ  ವಿದ್ಯುತ್‌ ನಿಲುಗಡೆಗೊಳಪಡುವ ಪ್ರದೇಶಗಳು:-

ವಿದ್ಯಾನಗರ, ತರಳಬಾಳು ನಗರ, ಜೆ.ಎಮ್.ಐ.ಟಿ ಕ್ಯಾಂಪಸ್ ಸುತ್ತ ಮುತ್ತ, ಕಾವಾಡಿಗರಹಟ್ಟಿ, ಎಮ್.ಕೆ.ಹಟ್ಟಿ, ಗಾರೇಹಟ್ಟಿ, ಎಮ್.ಆರ್. ಎಸ್.ಆರ್.ಲೇಔಟ್, ಮರಳುಸಿದ್ದೇಶ್ವರ ಬಡಾವಣೆ, ಹನುಮಂತ ನಗರ, ಇಂಡಸ್ಟ್ರಿಯಲ್ ಏರಿಯಾ, ಎಮ್.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳುಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್‌ಪೀ‌ರ್ ಲೇಔಟ್, ಆಶ್ರಯ ಬಡಾವಣೆ ಹಂತ-1 ಮತ್ತು ಹಂತ-2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ದವಳಗಿರಿ ಬಡಾವಣೆ 3ನೇಹಂತ, ವಿದ್ಯಾಶ್ರೀ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶ ವಿದ್ಯುತ್ ವ್ಯತ್ಯಯವಾಗಲಿದೆ.

ಫೆಬ್ರವರಿ 24 ರಂದು ಬೆಳಗ್ಗೆ 10.00 ರಿಂದ ಸಂಜೆ 06.00ರ    ವಿದ್ಯುತ್‌ ನಿಲುಗಡೆಗೊಳಪಡುವ ಪ್ರದೇಶಗಳು:- ಮುನ್ಸಿಪಲ್ ಕಾಲೋನಿ, ಭುವನೇಶ್ವರಿ ಸರ್ಕಲ್, ಕೆಳಗೋಟೆ, ಭೀಮಪ್ಪ ನಾಯಕರ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ. ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...