Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಧಿಕಾರ ಭ್ರಷ್ಟರನ್ನಾಗಿ ಮಾಡುತ್ತದೆ : ಸಾಣೇಹಳ್ಳಿ ಶ್ರೀ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15 : ಸಾಂಸ್ಕøತಿಕ ವಾತಾವರಣ ಇರುವಲ್ಲಿ ಯುದ್ಧಗಳು ಸಂಭವಿಸುವುದಿಲ್ಲ. ರಂಗಭೂಮಿ ಎನ್ನುವುದು ಮನುಷ್ಯನ ಮುಖಕ್ಕೆ ಹಿಡಿದ ಕೈಗನ್ನಡಿ. ಅದರಲ್ಲಿ ನಮ್ಮ ಬದುಕನ್ನೇ ನಾವು ನೋಡಿಕೊಳ್ಳುತ್ತೇವೆ. ಈ ಬಾರಿಯ ಶಿವಸಂಚಾರದ ನಾಟಕಗಳು ಪ್ರೇಕ್ಷಕರಲ್ಲಿ ಚಿಂತನೆಗೆ ಒಳಪಡಿಸುತ್ತವೆ. ಉತ್ತಮ ಸಂಸ್ಕಾರ, ಜನಜೀವನದ ವಾಸ್ತವದ ಬದುಕು ಮತ್ತು ಅದರ ನಿರ್ವಹಣೆಗೆ ಕೈಗೊಂಡ ತೀರ್ಮಾನಗಳು ಹೀಗೆ ಸಾಗುತ್ತಾ ಹೋಗುತ್ತವೆ. ಅಧಿಕಾರ ಎಂಬುದು ಮನುಷ್ಯನನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಕಳಂಕವಿಲ್ಲದೇ ನೆಮ್ಮದಿ ಬದುಕನ್ನು ಕಾಣುವ ವ್ಯಕ್ತಿ ಎಂದರೆ ಅದು ರೈತ ಮಾತ್ರ. ನಿಷ್ಠೆಯಿಂದ ಬದುಕು ನಡೆಸುತ್ತಾನೆ. ದೇಶಕ್ಕೇ ಮಾದರಿಯಾಗುತ್ತಾನೆ. ಚೈತನ್ಯದ ಬದುಕು ಸಮಾಜವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಬಸವಾದಿ ಶಿವಶರಣರ ಬದುಕು ಸ್ಪೂರ್ತಿಯಾಗಿರುತ್ತದೆ ಎಂದು ಸಾಣೇಹಳ್ಳಿ ಪರಮಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ಸ್ಕೂಲ್ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 14ರಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಶಿವಕುಮಾರ ಕಲಾ ಸಂಘದಿಂದ 3ನೇ ದಿನದ ಶಿವಸಂಚಾರ ನಾಟಕೋತ್ಸವ-2026 ನಾಟಕಗಳ ಪ್ರದರ್ಶನ, ರಂಗಉಪನ್ಯಾಸ, ಗೀತೆಗಳ ಗಾಯನ ಹಾಗೂ ಕಲಾವಿದರಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

 

ಜನಪರ ಮತ್ತು ಜನರನ್ನು ಜಾಗೃತಗೊಳಿಸುವ ನಾಟಕಗಳು ಜನರಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತವೆ. ಕೇವಲ ಮನೋರಂಜನೆಗಾಗಿ ನಾಟಕ ನೋಡುವುದಲ್ಲ. ರಂಗಭೂಮಿ ಮೂಲಕ ಸಾಮಾಜಿಕ ಪರಿವರ್ತನೆ ತರಬೇಕೆನ್ನುವುದು ನಮ್ಮ ಶಿವಸಂಚಾರ ನಾಟಕಗಳ ಆಶಯ. ಮೋಬೈಲ್ ಬಳಸುವುದು ತಪ್ಪೇನಿಲ್ಲ. ಅದನ್ನು ಅವಶ್ಯಕತೆ ಇದ್ದಷ್ಟು ಬಳಸಬೇಕು. ಮುಖ್ಯವಾಗಿ ಓದುವ ಮಕ್ಕಳಿಗೆ ಮೊಬೈಲ್ ನೀಡಿದರೆ ಶಿಕ್ಷಣ ಕುಂಟಿತಗೊಳ್ಳುತ್ತದೆ. ಪೋಷಕರಿಗೆ ಮಕ್ಕಳ ಬಗ್ಗೆ ಕಾಳಜಿ ಇರಬೇಕು ನಿಜ ಆದರೆ ಅದೇ ಮಕ್ಕಳು ಸುಖವಾಗಿರುತ್ತಾರೆ ಎಂಬ ನಂಬಿಕೆ ಇಲ್ಲ. ಆ ನಂಬಿಕೆಯನ್ನು ಬೆಳೆಸುವಲ್ಲಿ ರಂಗಭೂಮಿ ಕೂಡ ಕಾರಣವಾಗುತ್ತದೆ ಎಂದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಪರಮಪೂಜ್ಯ ಬಸವಕುಮಾರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಟಕಗಳ ಮೂಲಕ ಭ್ರಾತೃತ್ವ, ಸಮಾನತೆ, ಬಾಂಧವ್ಯ, ಮೂಡುತ್ತದೆ. ಈಗಲೂ ಹಳ್ಳಿಗಳಲ್ಲಿ ನಾಟಕ ಆಡಲಿಕ್ಕೆ ಜನಸಮೂಹ ಸೇರಿಕೊಳ್ಳುತ್ತದೆ. ಹಬ್ಬದರೀತಿಯಲ್ಲಿ ಇಡೀ ಹಳ್ಳಿಯನ್ನೇ ಸಿಂಗಾರಗೊಳಿಸಿರುತ್ತಾರೆ. ಅದು ಬರೀ ನಾಟಕ ಪ್ರದರ್ಶನವಾಗಿರದೆ ಬದುಕು ಮತ್ತು ಮನೋರಂಜನೆಯ ಭಾಗವಾಗಿರುತ್ತದೆ. ಎಲ್ಲರೂ ಒಟ್ಟಾಗಿ ಕೂಡಿ ಆಡುವ ವಾತಾವರಣ ಸೃಷ್ಟಿಯಾಗುತ್ತದೆ.

 

ಇಂದಿನ ಆದರ್ಶಗಳು ವಿಶ್ಲೇಷಣೆಗೆ ಮಾತ್ರ ಸೀಮಿತಗೊಂಡಿವೆ. ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅಪರೂಪ. ಇಂದು ಮನುಷ್ಯ ತನ್ನ ಏಕಾಗ್ರತೆಯನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿರುವುದಿಲ್ಲ. ಬದುಕಿನ ರೀತಿ ನೀತಿ ಮತ್ತು ಶೈಲಿಗಳಲ್ಲಿ ಬದಲಾಗಿದೆ. ಇದಕ್ಕೆ ಕಾರಣ ಸಂಸ್ಕಾರ ಜೊತೆಗೆ ಸಾಹಿತ್ಯ ಅಧ್ಯಯನದ ಕೊರತೆಯಾಗಿದೆ. ನಾಟಕಗಳ ಮೂಲಕ ಮನುಷ್ಯನ ಮಾನಸಿಕ ಬದಲಾವಣೆಗೆ ಒತ್ತು ನೀಡುವಂತಹ ಕಾರ್ಯ ನಡೆಸಬೇಕಿದೆ ಎಂದರು.

 

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ನಾಟಕಗಳು ಮನುಷ್ಯನ ಬದುಕಿನ ಒಂದು ಭಾಗ. ಅನೇಕ ರೀತಿಯಾಗಿ ಬದುಕಿನ ಪಾಠವನ್ನು ಕಲಿಸುತ್ತದೆ. ಸಿನಿಮಾಗಳನ್ನು ನೋಡುವ ಕಾಲವೊಂದಿತ್ತು. ಅದು ಈಗ ಮರೆಯಾಗುತ್ತಿದೆ. ಇಡೀ ಪ್ರಪಂಚದ ಆಗುಹೋಗುಗಳು ನಮ್ಮ ಅಂಗೈನಲ್ಲಿದೆ. ಮೊಬೈಲ್‍ನಲ್ಲಿ ಬೇಕಾದ ವ್ಯವಹಾರಗಳು ನಡೆಯುತ್ತವೆ. ಜಾಲತಾಣದಲ್ಲಿ ಮುಳುಗಿದ ಜನರು ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂದಿನ ಅತಿವೇಗದ ಕಾಲದಲ್ಲಿ ಸಂಪೂರ್ಣವಾಗಿ ಕಲೆಯನ್ನು ಆಸ್ವಾದಿಸುವುದು ವಿರಳವಾಗಿದೆ ಎಣದರು.

 

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ ಗೌರವ ಸನ್ಮಾನ ಸೀಕರಿಸಿ ಮಾತನಾಡಿ ಸಾಮಾಜಿಕ ಆಗುಹೋಗುಗಳಿಗೆ ಪ್ರತಿಕ್ರಿಯೆ ನೀಡುವುದು ಸೋಶಿಯಲ್ ಮೀಡಿಯಾ ಎಂಬಂತಾಗಿದೆ. ಪ್ರತಿಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ನೋಡುತ್ತಿದ್ದೇವೆ. ರಂಗಭೂಮಿಯಲ್ಲಿ ಸಕ್ರೀಯಗೊಳ್ಳುವ ಪ್ರತಿಕ್ರಿಯೆಗಳು ಬರುವ ದಿನಗಳಲ್ಲಿ ಹೆಚ್ಚಾಗಲಿ ಎಂದು ಆಶಿಸಿದರು.

 

ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ವಿಶ್ವಸ್ಥ ಸಮಿತಿಯ ಖಜಾಂಚಿ ಹಾಗೂ ಸಾಹಿತಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಶಿವಸಂಚಾರದ ಶಿವಯೋಗಿ ಸಿದ್ಧರಾಮ ನಾಟಕ ಕುರಿತು ಮಾತನಾಡಿದರು. ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ದಿವಾಕರ್, ಸಮಾಜ ಸೇವಕ ಆರ್.ಶೇಷಣ್ಣಕುಮಾರ್, ಹಿರಿಯ ಕಲಾವಿದ ಕೆ.ಜಂಬುನಾಥ, ಸಾಹಿತಿ ಹುರುಳಿ ಬಸವರಾಜ್, ರಂಗನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.

 

ಹಿಂದೂಸ್ಥಾನಿ ಗಾಯಕ ಆನಂದ ಪಾಟೀಲ ತಂಡದವರು ಹಿಂದೂಸ್ಥಾನಿ ಗಾಯನ ಮತ್ತು ಸುಗಮ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಪರಮಪೂಜ್ಯ ಪಂಡಿತಾರಾಧ್ಯ ಮಹಾಸ್ವಾಮೀಜಿ ವಿರಚಿತ ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ರಂಗಕರ್ಮಿ ವೈ.ಡಿ ಬದಾಮಿ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...